ಕೆಡುಕನ್ನು ಪ್ರದರ್ಶಿಸುವಂತೆ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿರುವ ಚೀನಾ

0
596

➤ಪರ್ವಾಝ್ ರಹ್ಮಾನಿ

ಚೀನಾದ ಪೂರ್ವ ಪ್ರಾಂತ್ಯ ಸಿಂಕಿಯಾಂಗ್‍ನ ಬಾಮಿ ಎಂಬ ನಗರದಲ್ಲಿ ಸ್ಥಳೀಯಾಡಳಿತವು ಮುಸ್ಲಿಮ್ ನಾಗರಿಕರಿಗೆ ಒಂದು ನೋಟೀಸು ಜಾರಿಗೊಳಿಸಿದೆ. ಅದರಲ್ಲಿ “ಮುಸ್ಲಿಮರು ಭಯೋತ್ಪಾದನೆಯನ್ನು ತೊರೆಯಬೇಕು. ವಿದೇಶಗಳಲ್ಲಿರುವ ಭಯೋತ್ಪಾದಕ ಸಂಘಟನೆಗಳೊಂದಿಗಿನ ಸಂಬಂಧ ಮುರಿಯಬೇಕು. ಹೊಣೆಗಾರ ನಾಗರಿಕರಂತೆ ವರ್ತಿಸಬೇಕು” ಎಂದು ಹೇಳಲಾಗಿದೆ.ಇದು ಸರಿ. ಭಯೋತ್ಪಾದನೆಯು ಅತ್ಯಂತ ಕೆಟ್ಟದು. ಇನ್ನು ಕೆಲವರಾದರೂ ಅಂತಹ ಚಟುವಟಿಕೆಗಳಲ್ಲಿ ನಿರತರಾಗಿದ್ದರೆ ಅವರು ಅದನ್ನು ಸ್ವಯಂ ಪ್ರೇರಣೆಯಿಂದ ತೊರೆಯಬೇಕು. ಸಭ್ಯ ನಾಗರಿಕ ರಾಗಿ ಬಾಳ ಬೇಕು. ಆದರೆ ಸ್ಥಳೀಯಾಡಳಿತ ಆದೇಶಗಳ ಪಟ್ಟಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅದರಲ್ಲಿ ಮುಂದುವರಿದು ಹೀಗೆ ಹೇಳಲಾಗಿದೆ.

ಎಲ್ಲ ರೀತಿಯ ಧಾರ್ಮಿಕ ತೀವ್ರವಾದ, ಸನಾತನ ಇಸ್ಲಾಮೀ ವಿಚಾರಗಳು, ಕುರ್‍ಆನಿನ ಪ್ರಚಾರ ಮತ್ತು ಅದರಂತೆ ಆಚಾರ, ಆಲ್ಕೋಹಾಲ್ ಮತ್ತು ಮಾದಕ ಪದಾರ್ಥಗಳ ವಿರೋಧ, ವಿವಾಹಾದಿ ಸಮಾರಂಭಗಳಲ್ಲಿ ನೃತ್ಯ ಗಾಯನ ಮತ್ತು ಸಂಗೀತದ ವಿರೋಧ, ಬಡ್ಡಿಯ ವಿರೋಧ, ಟೆಲಿವಿಜನ್‍ನ ವಿರೋಧ, ಸಿಗರೇಟ್ ಮತ್ತು ಧೂಮಪಾನ ವಿರೋಧ, ಕೆಲವು ಸರಕಾರಿ ಯೋಜನೆಗಳ ವಿರೋಧ ಇತ್ಯಾದಿಗಳನ್ನು ಮಾಡಲೇಬಾರದು. ಈ ಆದೇಶಗಳನ್ನು ಕೂಡಲೇ ಪಾಲಿಸಬೇಕು ಮತ್ತು ಮೂರು ದಿವಸಗಳ ಬಳಿಕ ಅದರ ವರದಿಯನ್ನು ಸ್ಥಳೀಯಾಡಳಿತಕ್ಕೆ ಸಲ್ಲಿಸಬೇಕು. ಅನ್ಯಥಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೂರು ದಿವಸಗಳ ಬಳಿಕ ಪ್ರತಿಯೊಬ್ಬ ನಾಗರಿಕನೂ ತನ್ನ ವೈಯಕ್ತಿಕ ವರದಿಯನ್ನು ಸಲ್ಲಿಸಬೇಕು. (ಏಷ್ಯನ್ ಏಜ್- ನವೆಂಬರ್ 20)

ಸಿಂಕಿಯಾಂಗ್‍ನಲ್ಲಿ ಮುಸ್ಲಿಮ್ ನಾಗರಿಕರ ಹೆಸರಿಗೆ ಈ ರೀತಿಯ ಬಲವಂತ ಆದೇಶಗಳು ಸರಕಾರದ ವತಿಯಿಂದ ನಿರಂತರ ಜಾರಿಗೊಳ್ಳುತ್ತಲೇ ಇದೆ. ಕೆಲವೊಮ್ಮೆ ಅಂಗಡಿದಾರರೊಂದಿಗೆ ಹೀಗೆ ಹೇಳಲಾಗುತ್ತದೆ- ನಿಮ್ಮ ಅಂಗಡಿಯಲ್ಲಿ ಮದ್ಯ, ಮಾದಕ ಪದಾರ್ಥಗಳು ಹಾಗೂ ಇಸ್ಲಾಮ್ ನಿಷಿದ್ಧವೆಂದು ಸಾರಿದ ವಸ್ತುಗಳನ್ನು ಕಡ್ಡಾಯವಾಗಿ ಇಡಬೇಕು. ಜನರಿಗೆ ಪ್ರೇರಣೆ ಸಿಗಲು ಮತ್ತು ಅವರಲ್ಲಿ ಅದನ್ನು ಬಳಸುವ ಆಗ್ರಹ ಉಂಟಾಗಲು ಅವುಗಳನ್ನು ಪ್ರದರ್ಶಿಸಲೂಬೇಕು.

ಇಸ್ಲಾಮ್ ಧರ್ಮ ಮತ್ತು ಕುರ್‍ಆನಿನಂತೆ ಬಹಿರಂಗವಾಗಿ ನಡೆಯುವುದು ಮತ್ತು ಅದರ ಪ್ರೇರಣೆಯನ್ನು ಇತರರಿಗೆ ನೀಡುವುದೂ ನಿಷಿದ್ಧ. ಮೊದಲು ಹೇಳಲಾಗುತ್ತಿತ್ತು- “ಜಿಹಾದ್, ಸಮರ, ಗಲಭೆಗೆ ಸಂಬಂಧಿಸಿದ ಕುರ್‍ಆನಿನ ಆದೇಶಗಳನ್ನು ಪಾಲಿಸಬಾರದು. ಅದರ ನೈತಿಕ ಶಿಕ್ಷಣಗಳನ್ನು ಮಾತ್ರ ಪಾಲಿಸಿದರೆ ಸಾಕು.” ಆದರೆ ಈಗ ನೈತಿಕ ಶಿಕ್ಷಣವನ್ನು ಪಾಲಿಸುವುದೂ ನಿಷಿದ್ಧವೆಂದು ಹೇಳಲಾಗುತ್ತಿದೆ. ಈಗಂತೂ ಈ ಸುದ್ದಿ ಕೇವಲ ಬಾಮಿ ನಗರದ ಕುರಿತಾಗಿ ಬಂದಿದೆ. ಆದರೆ ಈ ಪ್ರಯೋಗದ ಬಳಿಕ ಇತರ ನಗರಗಳಿಗೂ ಇದನ್ನು ಹೇರಲಾದೀತು. ಚೀನಾದಲ್ಲಿ ಇತರ ಮತ ಧರ್ಮಗಳಿಗೂ ನಿಷೇಧವಿದೆ. ಆದರೆ ಇಸ್ಲಾಮ್ ಮತ್ತು ಅದರ ಶಿಕ್ಷಣ ಮೇಲೆ ಅದು ಕಠಿಣವಾಗಿದೆ. ಚೀನಾ ಸರಕಾರವು ರಾಜಕೀಯ ವಿರೋಧಿಗಳ ಪ್ರತೀಕಾರವನ್ನು ಮುಸಲ್ಮಾನರೊಂದಿಗೆ ತೀರಿಸುತ್ತಿದೆ.

ಇದಕ್ಕೆ ಕಾರಣವೇನೆಂದರೆ, ಮಾನವರ ಜೀವನ ಮತ್ತು ವಿಚಾರದಲ್ಲಿ ಧನಾತ್ಮಕ ಮೂಲಭೂತ ಬದಲಾವಣೆ ತರುವ ಧರ್ಮ ಇಸ್ಲಾಮ್ ಮಾತ್ರ ವಾಗಿದೆ. ಅದು ಮಾನವರನ್ನು ಅಕ್ರಮ, ಹಿಂಸೆ ಮತ್ತಿತರ ಎಲ್ಲ ರೀತಿಯ ಕೆಡುಕುಗಳಿಂದ ತಡೆ ಯುತ್ತದೆ. ಅವರಲ್ಲಿ ಅತ್ಯುತ್ತಮ ಚಾರಿತ್ರ್ಯವನ್ನುಂಟು ಮಾಡುತ್ತದೆ. ಲೋಕದಲ್ಲಿ ಅತ್ಯುತ್ತಮ ಮತ್ತು ಸಂತುಲಿತ ಆರ್ಥಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಆದರೆ ದುರದೃಷ್ಟವಶಾತ್ ಕಮ್ಯುನಿಸ್ಟ್ ದೇಶಗಳು ಮತ್ತು ಕಮ್ಯುನಿಸ್ಟ್ ಪಕ್ಷಗಳು ಇದನ್ನು ಅರಿಯಲು ಪ್ರಯತ್ನಿಸುವುದಿಲ್ಲ. ಅವು ಎಲ್ಲರನ್ನೂ ಒಂದೇ ದಂಡದಿಂದ ಅಟ್ಟುತ್ತದೆ. ಇತ್ತೀಚೆಗೆ ಪಾಕಿಸ್ತಾನ ಸರಕಾರವು ರಾಜತಾಂತ್ರಿಕ ಮಟ್ಟದಲ್ಲಿ ಚೀನಾ ದೊಂದಿಗೆ ಸಂಪರ್ಕ ಬೆಳೆಸಿ ಸಿಂಕಿಯಾಂಗ್‍ನಲ್ಲಿ ಮುಸಲ್ಮಾನರ ಮೇಲೆ ನಡೆಸಲಾಗುವ ಅತಿರೇಕಗಳ ಕುರಿತು ಗಮನ ಸೆಳೆದಿತ್ತು. ಆದರೆ ಅದರ ಪರಿಣಾಮವೇನಾಯಿತೋ ಗೊತ್ತಿಲ್ಲ.

ಚೀನಾವನ್ನು ಪಾಕಿಸ್ತಾನದ `ಎಲ್ಲ ಕಾಲದ ಮಿತ್ರ’ (All weather Friend ) ಎಂದು ಭಾವಿಸಲಾಗುತ್ತದೆ. ಇಸ್ಲಾಮಾಬಾದ್‍ನಲ್ಲಿ ಚೀನಾದ ರಾಯಭಾರಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಅವರಿಗೆ ಇಸ್ಲಾಮಿನ ಸಂಬಂಧ ಏನಾದರೂ ಮಾತುಕತೆ ನಡೆಸಿದ್ದರೋ ಎಂದು ತಿಳಿದಿಲ್ಲ. ಒಂದು ವೇಳೆ ಮಾಡಿಲ್ಲವೆಂದಾದರೆ ಇನ್ನೊಮ್ಮೆ ಮುಸ್ಲಿಮ್ ದಾರ್ಶನಿಕರ ಸಹಾಯದೊಂದಿಗೆ ಮಾತುಕತೆ ನಡೆಸಬೇಕು. ಚೀನಾದ ಮುಸಲ್ಮಾನರು ಶರಾಬು, ಮಾದಕ ದ್ರವ್ಯಗಳು, ಬಡ್ಡಿ, ನಿಷಿದ್ಧ ಕಾರ್ಯಗಳು ಹಾಗೂ ಅನರ್ಥಕಾರಿ ವಿಷಯಗಳಿಂದ ಚೀನಾದ ಜನಸಾಮಾನ್ಯರನ್ನು ಪಾರುಗೊಳಿಸಬೇಕು. ಚೀನಾ ಅದನ್ನು ಗೌರವಿಸಬೇಕು. ಇಸ್ಲಾಮ್ ಧರ್ಮದ ಕುರಿತು ಹೊಸತಾಗಿ ಮುಕ್ತ ಮನಸ್ಸಿನೊಂದಿಗೆ ಚಿಂತನೆ ನಡೆಸಬೇಕು.