ಬ್ರಹ್ಮಪುತ್ರ ನದಿಯಲ್ಲಿ ಚೀನದಿಂದ ಜಲವಿದ್ಯುತ್ ಯೋಜನೆ!

0
140

ಸನ್ಮಾರ್ಗ ವಾರ್ತೆ

ಬೀಜಿಂಗ್,ನ.30: ಟಿಬೆಟ್‍ನ ಬ್ರಹ್ಮಪುತ್ರ ನದಿಯಲ್ಲಿ ಜಲವಿದ್ಯುತ್ ನಿಲಯ ನಿರ್ಮಿಸಲು ಚೀನ ಮುಂದಾಗಿದೆ. 14ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಮುಂದಿನ ವರ್ಷ ಯೋಜನೆ ಆರಂಭಿಸಲು ಚೀನ ಬಯಸುತ್ತಿದೆ ಚೀನದ ಕಂಪೆನಿ ಮುಖ್ಯಸ್ಥರನ್ನು ಉದ್ಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಬ್ರಹ್ಮಪುತ್ರ ನದಿಯಲ್ಲಿ ಚೀನ ಜಲವಿದ್ಯುತ್ ಯೋಜನೆಗೆ ಜಲಮೂಲಗಳನ್ನು ಉಪಯೋಗಿಸಲಾಗವುದು ಮತ್ತು ಆಂತರಿಕ ಸುರಕ್ಷೆಯನ್ನು ಉಳಿಸಿಕೊಳ್ಳಲು ಯೋಜನೆಯಿಂದ ಸಾಧ್ಯವಿದೆ ಎಂದು ಚೀನದ ಪವರ್ ಕನ್ಸಟ್ರಕ್ಷನ್ ಕಾರ್ಪೊರೇಷನ್ ಚೇರ್‍ಮೆನ್ ಯಾನ್ ಸಿಯಾಂಗ್ ಹೇಳಿದ್ದಾರೆಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಮುಂದಿನ ವರ್ಷದಲ್ಲಿ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‍ನಿಂದ ಅಧಿಕೃತ ಅಂಗೀಕಾರ ಸಿಕ್ಕ ಬಳಿಕ ಯೋಜನೆಯ ವಿವರಗಳನ್ನು ಬಹಿರಂಗಗೊಳಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದು ಅರುಣಾಚಲ ಪ್ರದೇಶಕ್ಕೆ ಹತ್ತಿರವಿರುವ ಮೆಡೊಂಗ್ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ ಜಾರಿಗೊಳ್ಳಲಿದ್ದು ಇದು ಬಾಂಗ್ಲಾ-ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬ್ರಹ್ಮಪುತ್ರ ನದಿಗೆ ಈಗಾಗಲೇ ಚೀನ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿದೆ. ಮಧ್ಯ ಚೀನದ ಪ್ರಸಿದ್ಧ ಅಣೆಕಟ್ಟುಗಳಿಗಿಂತ ಮೂರು ಪಟ್ಟು ವಿದ್ಯುತ್ ನಿರ್ಮಾಣ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಲು ಚೀನ ಮುಂದಾಗಿದೆ. ಆಡಳಿತ ಪಕ್ಷ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನದ ಯೂತ್ ಲೀಗ್‍ನ ಸಾಮಾಜಿ ಮಾಧ್ಯಮ ಪ್ಲಾಟ್‍ಫಾರ್ಮಿನಲ್ಲಿ ಅಣೆಕಟ್ಟಿನ ಪ್ರಥಮ ವಿವರಗಳನ್ನು ಕಳೆದ ವರ್ಷ ಹೊರಗೆಡವಲಾಗಿತ್ತು.