ಹಾಂಕಾಂಗ್ ಪ್ರತಿಭಟನಾಕಾರರಿಗೆ ನೊಬೆಲ್ ನೀಡಿದರೆ ಚೆನ್ನಾಗಿರಲ್ಲ: ಚೀನ ಬೆದರಿಕೆ

0
149

ಸನ್ಮಾರ್ಗ ವಾರ್ತೆ

ಬೀಜಿಂಗ್:ಹಾಕಾಂಗ್ ಪ್ರಜಾಪ್ರಭುತ್ವ ವಾದಿಗಳಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿದರೆ ತೀಕ್ಷ್ಣ ಪ್ರತಿಕ್ರಿಯೆ ಸಹಿಸಿಕೊಳ್ಳಬೇಕಾದೀತು ಎಂದು ಚೀನ ನೋರ್ವೆಗೆ ಬೆದರಿಕೆ ಹಾಕಿದೆ.

ಹದಿನೈದು ವರ್ಷದಲ್ಲಿ ಮೊದಲ ಬಾರಿ ನೋರ್ವೆಗೆ ಭೇಟಿ ನೀಡಿದ ಚೀನದ ವಿದೇಶ ಸಚಿವ ವಾಂಗ್ ಯಿ ನೊಬೆಲ್ ಪುರಸ್ಕಾರ ಎರಡು ದೇಶಗಳ ಸಂಬಂಧಕ್ಕೆ ಬಾಧೆ ತಂದೊಡ್ಡಬಹುದು ಎಂದು ಮುನ್ನೆಚ್ಚರಿಕೆ ನೀಡಿದರು.

ಈ ಹಿಂದೆ ಚೀನದ ಮಾನವಹಕ್ಕು ಕಾರ್ಯಕರ್ತ ಲಿಯು ಝಿಯೊಬೊರಿಗೂ ಟಿಬೆಟಿನ್ ಧರ್ಮಗುರು ದಲೈ ಲಾಮರಿಗೂ ನೊಬೆಲ್ ನೀಡಿದ್ದು ಚೀನ-ನೋರ್ವೆ ಸಂಬಂಧ ಹಳಸಲು ಕಾರಣವಾಗಿತ್ತು.

ಚೀನದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ನೊಬೆಲ್ ಶಾಂತಿ ಪುರಸ್ಕಾರವನ್ನು ಉಪಯೋಗಿಸುತ್ತಿರುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ವಾಂಗ್‍ಯಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.