ಕಾಶ್ಮೀರದ ಪರಿಸ್ಥಿತಿಯ ಮೇಲೆ ನಾವು ನಿಗಾ ಇರಿಸಿದ್ದೇವೆ- ಚೀನ

0
237

ಸನ್ಮಾರ್ಗ ವಾರ್ತೆ

ಬೀಜಿಂಗ್,ಅ.9: ಕಾಶ್ಮೀರದ ಪರಿಸ್ಥಿತಿಯ ಮೇಲೆ ನಾವು ನಿಗಾ ಇರಿಸಿದ್ದೇವೆ ಎಂದು ಚೀನದ ಅಧ್ಯಕ್ಷ ಶಿಜಿನ್‍ಪಿಂಗ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು. ವಿಷಯದಲ್ಲಿನ ಸರಿ ತಪ್ಪು ಮನವರಿಕೆ ಆಗಿದೆ. ಇಮ್ರಾನ್ ಖಾನ್‍ರೊಂದಿಗಿನ ಚರ್ಚಿಸಿದ ಬಳಿಕ ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಎರಡು ದೇಶಗಳು ಸಮಸ್ಯೆಯನ್ನು ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕಾಗಿದೆ ಎಂದು ಚೀನ ಹೇಳಿದೆ. ನರೇಂದ್ರ ಮೋದಿ ಶಿಜಿನ್ ಪಿಂಗ್ ಸಮಾಲೋಚನೆ ನಡೆಯಲಿದ್ದು ಇದೇ ವೇಳೆ ಚೀನ ತನ್ನ ನಿಲುವನ್ನು ಬಹಿರಂಗಪಡಿಸಿದೆ.