ಉಯಿಘರ್ ಮುಸ್ಲಿಂ ಮಹಿಳೆಯರ ವಿರುದ್ಧ ಹೇಳಿಕೆ: ಚೈನೀಸ್ ರಾಯಭಾರಿ ಕಚೇರಿ ಟ್ವಿಟರ್ ಖಾತೆ ರದ್ದು

0
355

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಸಿಂಜಿಯಾಂಗ್‍ನ ಉಯಿಘರ್ ಮುಸ್ಲಿಮರ ವಿರುದ್ಧ ಹಲವು ವರ್ಷಗಳಿಂದ ಕ್ರೂರ ದೌರ್ಜನ್ಯ ನಡೆಸುತ್ತಿರುವುದು ಈಗಾಗಲೇ ಜಗತ್ತಿಗೆ ತಿಳಿಸಿದು ಬಂದಿದ್ದು, ಈ ನಡುವೆ ಉಯಿಘರ್ ಮುಸ್ಲಿಂ ಮಹಿಳೆಯರನ್ನು ಅಪಮಾನಿಸಿ ಹೇಳಿಕೆ ನೀಡಿದ ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಯನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ.

ಉಯಿಘರ್ ಮಹಿಳೆಯರು ಇನ್ನು ಮಕ್ಕಳನ್ನು ಹುಟ್ಟಿಸುವ ಮೆಶಿನ್‍ಗಳಲ್ಲ ಎಂದು ಟ್ವೀಟ್ ಮಾಡಲಾಗಿತ್ತು. ಜನವರಿ ಎರಡನೆ ವಾರ ನಿಷೇಧಿಸಲಾದ ಬಳಿಕ ಈವರೆಗೆ ಖಾತೆಯಿಂದ ಯಾವುದೇ ಟ್ವೀಟ್‍ಗಳು ಬಂದಿಲ್ಲ.

ಸಿಂಜಿಯಾಂಗ್ ಉಯಿಘರ್ ಮುಸ್ಲಿಮರ ವಿರುದ್ಧ ಚೀನ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ವ್ಯಾಪಕ ಟೀಕೆಗಳಿವೆ. ಈ ವಿಷಯದಲ್ಲಿ ವಿಶ್ವಸಂಸೆ ಮಧ್ಯಪ್ರವೇಶಿಸಿದರೂ ಉಯುಗುರ್‍ಗಳ ವಿರುದ್ಧ ಕ್ರಮ ನಿಲ್ಲಿಸುವುದಿಲ್ಲ ಎಂದು ಚೀನ ನಿಲುವು ವ್ಯಕ್ತಪಡಿಸುತ್ತಿದೆ. ನಗರದಾದ್ಯಂತ ಜೈಲು ಸ್ಥಾಪಿಸಿ ಲಕ್ಷಾಂತರ ಉಯುಗುರ್ ಜನರನ್ನು ಇರಿಸಲಾಗಿದೆ ಎಂದು ವರದಿಗಳು ತಿಳಿಸುತ್ತಿವೆ.

ಮುಸ್ಲಿಮರು ಅವರ ಧರ್ಮ ಆಚರಿಸುವುದನ್ನು ನಿಷೇಧಿಸಿ ಅದರ ಬದಲಿಗೆ ಚೀನಾ ಸರಕಾರ ನಿಶ್ಚಯಿಸಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈ ಜೈಲುಗಳಲ್ಲಿ ಅವರನ್ನು ಇರಿಸಲಾಗಿದೆ. ಉಯಿಘರ್ ಮುಸ್ಲಿಂ ಮಹಿಳೆಯರನ್ನು ಬಲವಂತದಿಂದ ಬಂಜೆಯರನ್ನಾಗಿಸಲಾಗುತ್ತಿದ್ದೆ. ಗರ್ಭಹತ್ಯೆ ಮಾಡಲಾಗುತ್ತಿದೆ ಎಂದು ಕಳೆದ ವರ್ಷ ಜರ್ಮನಿಯ ಸಂಶೋಧಕ ಅಡ್ರಿಯಾನ್ ಸೆನ್ಸ್ ವರದಿಯಲ್ಲಿ ತಿಳಿಸಿದ್ದಾರೆ.

ಟ್ವಿಟರ್ ನಿಷೇಧದ ಕುರಿತು ಚೀನದ ದೂತವಾಸ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕಾಪಿಟಲ್ ದಾಳಿಗೆ ಟ್ವಿಟರ್ ಬಳಸಿದ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಯನ್ನು ಟ್ವಿಟರ್ ರದ್ದುಪಡಿಸಿತ್ತು.