ಚೀನಾ: ವುಹಾನಿನ ಕೊರೋನವನ್ನು ಜಗತ್ತಿಗೆ ತಿಳಿಸಿದ ವಕೀಲೆಗೆ 4 ವರ್ಷ ಜೈಲು!

0
199

ಸನ್ಮಾರ್ಗ ವಾರ್ತೆ

ಬೀಜಿಂಗ್,ಡಿ.29: ವುಹಾನಿನಲ್ಲಿ ಕಾಣಿಸಿಕೊಂಡಿದ್ದ ಕೊರೋನ ಸೋಂಕಿನ ಕುರಿತು ಮೊದಲು ಜಗತ್ತಿಗೆ ತಿಳಿಸಿದ ವಕೀಲೆಗೆ ಚೀನದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿದೆ. ದೇಶದ ವಿರುದ್ಧ ಗಲಭೆ ಮತ್ತು ಕ್ಷೋಭೆ ಸೃಷ್ಟಿಸಿದ ಆರೋಪದಡಿಯಲ್ಲಿ ಶಾಂಗ್ ಶಾನ್ ಎಂಬ ವಕೀಲೆಯನ್ನು ಶಿಕ್ಷಿಸಲಾಗಿದೆ. ತಪ್ಪು ಮಾಹಿತಿಯನ್ನು ಮಹಿಳೆ ಪ್ರಚಾರ ಮಾಡಿದ್ದಾರೆಂದು ಕೋರ್ಟು ಆರೋಪಿಸಿದೆ.

ಕಳೆದ ಫೆಬ್ರುವರಿಯಲ್ಲಿ ವುಹಾನ್ ಸಂದರ್ಶಿದ ಶಾಂಗ್ ಶಾನ್ ವಿಶೇಷ ರೀತಿಯ ನ್ಯೂಮೇನಿಯ ಜೀವ ಬಲಿ ಪಡೆದುಕೊಂಡು ಹರಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಜಗತ್ತಿಗೆ ತಿಳಿಸಿದ್ದರು. ನಂತರ ಮೇಯಲ್ಲಿ ಶಾಂಗ್‍ರನ್ನು ಬಂಧಿಸಲಾಗಿತ್ತು. ಬಂಧನದ ವೇಳೆ ಅನಿರ್ಧಿಷ್ಟಾವಧಿ ನಿರಾಹಾರ ಸತ್ಯಾಗ್ರಹ ಮಾಡಿದ್ದರಿಂದ ಅವರ ಆರೋಗ್ಯ ಈಗಲೂ ಕೆಟ್ಟಿದೆ ಎಂದು ವರದಿಗಳಿವೆ. ವ್ಯೂಹಾನಿನ ಕುರಿತ ಮಾಹಿತಿಯನ್ನು ಜಗತ್ತಿಗೆ ತಿಳಿಸಿದ ಕೆಲವು ವೈದ್ಯರನ್ನು ಚೀನ ಜೈಲಿಗಟ್ಟಿದೆ.