ಚೀನಾ: ಇನ್ನು ಮುಂದೆ ವಿಜ್ಞಾನ ವಾರ್ತೆ ಬರೆಯುವುದು ಶಾವೋಕ್; ಈತನಾರು ಗೊತ್ತೇ?

0
87

ಬೀಜಿಂಗ್, ಆ. 13: ಚೀನದಲ್ಲಿ ವಿಜ್ಞಾನ ಸುದ್ದಿಯನ್ನು ಬರೆಯಲು ರೊಬೊಟ್ ಬಂದಿದೆ. ಚೀನದ ಸೈನ್ಸ್ ಡೈಲಿ ಮುಂಪಕ್ತಿಯ ಸಯನ್ಸ್ ಜರ್ನಲ್‍ಗಳನ್ನು ಆಧಾರವಾಗಿಟ್ಟು ವೈಜ್ಞಾನಿಕ ವರದಿಗಳನ್ನು ಸ್ವಂತವಾಗಿ ಬರೆಯಲು ಸಾಫ್ಟ್ ವೇರ್ ಉಪಯೋಗಿಸತೊಡಗಿದೆ.

ಶಾವೋಕ್ ಎನ್ನುವ ಸಯನ್ಸ್ ರೊಬೊಟ್‍ಗಳನ್ನು ಪೆಕಿಂಗ್ ವಿಶ್ವವಿದ್ಯಾನಿಲಯದ ಸಂಶೋಧಕರ ಜೊತೆ ಸೇರಿ ಸಯನ್ಸ್ ಡೈಲಿ ತಯಾರಿಸಿದೆ. ಸಯನ್ಸ್, ನೇಚರ್, ಸೆಲ್. ನ್ಯೂ ಇಂಗ್ಲಿಷ್ ಜರ್ನಲ್ ಆಫ್ ಮೆಡಿಸಿನ್ ಮೊದಲಾದ ವೈಜ್ಞಾನಿಕ ಜರ್ನಲ್‍ಗಳಿಂದ 200ರಷ್ಟು ವರದಿಗಳನ್ನು ಶಾವೋಕ್ ಸೃಷ್ಟಿಸಿದ್ದು ಅದು ಬರೆದ ವರದಿಗಳು ಪರಿಶೀಲಿಸಿದ ಬಳಿಕ ಪ್ರಕಟಿಸಲಾಗುತ್ತಿದೆ. ಚೀನದ ವಿಜ್ಞಾನಿಗಳ ಭಾಷೆಯ ಸಂಕಷ್ಟ ಪರಿಹರಿಸುವ ಸಲುವಾಗಿ ಒಂದು ಮಿಶ್ರಭಾಷಾ ಅಕಾಡಮಿಕ್ ಸೆಕ್ಟರ್ ಆಗಿ ಶಾವೋಕ್‍ಗಳನ್ನು ಬದಲಿಸುವ ಯತ್ನವನ್ನೂ ಸಂಶೋಧಕರು ಮಾಡುತ್ತಿದ್ದಾರೆ. ಇದರೊಂದಿಗೆ ಇಂಗ್ಲಿಷ್ ಪ್ರಕಟಣೆಗಳಲ್ಲಿ ಬರುವ ಅತ್ಯಂತ ಹೊಸ ವೈಜ್ಞಾನಿಕ ವಾರ್ತೆಗಳು ಭಾಷೆಯ ಕಗ್ಗಂಟನ್ನು ಮೀರಿ ಚೈನಿಸ್ ವಿಜ್ಞಾನಿಗಳಿಗೆ ಲಭ್ಯವಾಗಲಿದೆ. ಕೇವಲ ಭಾಷಾಂತರ ಎನ್ನುವುದಕ್ಕಿಂತ ಕಾಂಟೆಂಟ್ ಜನರೇಶನ್ ಶಾವೋಕ್ ಮಾಡುತ್ತಿದೆ ಎಂದು ಪೆಕಿಂಗ್ ವಿಶ್ವಾವಿದ್ಯಾನಿಲಯದ ಸಂಶೋಧಕ ವಾನ್ ಶ್ಯೋವೊಜುನ್ ತಿಳಿಸಿದರು.

LEAVE A REPLY

Please enter your comment!
Please enter your name here