ಚುನಾವಣೆಗೆ ಸಜ್ಜಾಗುತ್ತಿರುವ ವಿವೇಕ್ ಒಬೆರಾಯ್, ಮಮ್ಮುಟ್ಟಿ, ಸಿದ್ದೀಕಿ, ಮೈ ನೇಮ್ ಈಸ್ ರಾಗಾ…

0
403

ಲೋಕಸಭಾ ಚುನಾವಣೆಗೆ ಪೂರಕವಾಗಿ ರಾಜಕೀಯ ಪಕ್ಷಗಳು ಅದರಲ್ಲೂ ಬಿಜೆಪಿಯು ಪ್ರಚಾರಕ್ಕೆ ಧುಮುಕಿದೆ. ಅದು ಈ ಬಾರಿ ಸಿನಿಮಾ ಕ್ಷೇತ್ರವನ್ನು ತನ್ನ ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳುವತ್ತ ತೀವ್ರ ಚಿಂತನೆ ನಡೆಸಿದೆ. 2016 ರ ಸೆಪ್ಟೆಂಬರ್ ನಲ್ಲಿ ಸೇನೆ ನಡೆಸಿದ ಉರಿ ಸರ್ಜಿಕಲ್ ಸ್ಟ್ರೈಕನ್ನು ಆಧಾರವಾಗಿಸಿ URI: The Sergical Straike ನಿಂದ ತೊಡಗಿ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ರನ್ನು ಬಲಹೀನರಾಗಿ ತೋರಿಸುತ್ತದೆಂದು ಹೇಳಲಾದ The Accidental Priminister ವರೆಗೆ ಹಲವು ಸಿನಿಮಾಗಳು ಬಿಡುಗಡೆಗೊಂಡಿವೆ.
ಬಾಲ ಠಾಕ್ರೆ ಯವರನ್ನು ಹೊಗಳುವ ಠಾಕ್ರೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ ಎಸ್ ಆರ್ ರೆಡ್ಡಿ ಅವರ ಬಗ್ಗೆ ಚಿತ್ರಿಸಲಾದ ಮತ್ತು ಮಲಯಾಳಂ ನಟ ಮಮ್ಮುಟ್ಟಿ ಪ್ರಧಾನ ಪಾತ್ರದಲ್ಲಿರುವ ಯಾತ್ರಾ, ಎನ್ ಟಿ ರಾಮರಾವ್ ಅವರನ್ನು ಕೇಂದ್ರೀಕರಿಸಲಾದ ಕಥಾನಾಯಗುಡು ಈಗಾಗಲೇ ಬಿಡುಗಡೆಗೊಂಡಿದೆ.

ಇದರ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ಜೀವನ ಕಥನವನ್ನು ಹೇಳುವ ಮತ್ತು ವಿವೇಕ್ ಒಬೆರಾಯ್ ಪ್ರಧಾನ ಪಾತ್ರದಲ್ಲಿರುವ ‘ಪಿ ಎಂ ನರೇಂದ್ರ ಮೋದಿ’ ಎಂಬ ಸಿನಿಮಾ ಭರದ ಚಿತ್ರೀಕರಣದಲ್ಲಿ ತೊಡಗಿದ್ದು, ಲೋಕಸಭಾ ಚುನಾವಣೆಗೆ ಮೊದಲೇ ಇದು ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗೆಯೇ ರೂಪೇಶ್ ಪೋಲ್ ಅವರ ನಿರ್ದೇಶನದಲ್ಲಿ ರಾಹುಲ್ ಗಾಂಧಿಯ ಸುತ್ತ ‘ಮೈ ನೇಮ್ ಈಸ್ ರಾಗ’ ಸಿನಿಮಾ ಕೂಡ ಬಿಡುಗಡೆಗೊಳ್ಳಲಿದೆ.

2016 ರ ಉರಿ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಸೇನೆ ನಡೆಸಿದ ದಾಳಿಯನ್ನು ಹೇಳುವ Uri ಸಿನಿಮಾದಲ್ಲಿ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ರನ್ನು ಹೋಲುವ ಪಾತ್ರವಿದೆ. ನಿರ್ದೇಶನ ಆದಿತ್ಯ ಧರ್. ಹಾಗೆಯೇ ಅಭಿಜಿತ್ ಪಾಂಡೆ ನಿರ್ದೇಶಿಸಿರುವ ಠಾಕ್ರೆ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದೀಕಿ ಠಾಕ್ರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗ ಚುನಾವಣಾ ಅಂದರೆ ನಾಯಕರನ್ನು ಅತೀಂದ್ರೀಯ ಶಕ್ತಿಗಳಂತೆ ಪ್ರದರ್ಶಿಸುವುದು. ಇದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.