ಪೌರತ್ವ ಮಸೂದೆಯಲ್ಲಿ ಭೇದಭಾವ; ಮುಸ್ಲಿಂ ವಿರೋಧಿ ಧೋರಣೆ- ಸಾಲಿಡಾರಿಟಿ

0
829

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್,ಡಿ.7: ಪ್ರಜಾಪ್ರಭುತ್ವದ ಬುನಾದಿ ಮೌಲ್ಯಗಳಿಂದ ಎಲ್ಲರಿಗೂ ಇರುವ ಸಮಾನ ನ್ಯಾಯವನ್ನು ಕಿತ್ತುಕೊಳ್ಳುವ ಉದ್ದೇಶದಿಂದ ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಪೌರರನ್ನು ದೇಶದಲ್ಲಿ ಅನ್ಯರನ್ನಾಗಿ ಚಿತ್ರೀಕರಿಸಿ ಹೊರ ದಬ್ಬುವ ಸಂಘಪರಿವಾರದ ಮುಸ್ಲಿಮ್ ವಿರೋಧಿ ಯೋಜನೆಯು ಇದೆಂದು ಸಾಲಿಡಾರಿಟಿ ರಾಜ್ಯ ಅಧ್ಯಕ್ಷ ನಹಾಸ್ ಮಾಳ ಹೇಳಿದರು.

ಧರ್ಮಧ ಆಧಾರದಲ್ಲಿ ಒಂದು ವಿಭಾಗವನ್ನು ಮಾತ್ರ ಬಲಿಪಶು ಮಾಡುವ ರೀತಿಯಲ್ಲಿ ಭೇದ-ಭಾವದಿಂದ ಕೂಡಿದ ಪೌರತ್ವ ತಿದ್ದುಪಡಿ ಮಸೂದೆ ತರಲು ಬಿಜೆಪಿ ಸರಕಾರ ಮುಂದಾಗಿದೆ.ಎನ್ಆರ್‍‌ಸಿಯ ಮರೆಯಲ್ಲಿ ಎನ್‍ಆರ್‍‌ಸಿಯ ಮೂಲಕ ಪೌರರನ್ನು ಸಂದೇಹದ ಕರಿನೆರಳಿನಲ್ಲಿಡಲು ಹೊರಟಿರುವ ಬಿಜೆಪಿ ಮುಸ್ಲಿಮರನ್ನು ಬಲಿಪಶುಗಳನ್ನಾಗಿಸುವ ಗೂಢಾಲೋಚನೆ ಹೆಣೆದಿದೆ ಎಂದು ನಹಾಸ್ ಮಾಳ ಹೇಳಿದರು.

ವಿಶೇಷ ಸ್ಥಾನಮಾನ ರಾಷ್ಟ್ರೀಯತೆಯ ವಿರುದ್ಧವಾಗಿದೆ ಎಂದು ವಾದಿಸಿ ಕಾಶ್ಮೀರವನ್ನು ವಿಭಜಿಸಲಾಯಿತು. ಈಗ ಪೌರತ್ವ ಪಟ್ಟಿ ಕೆಲವು ಪ್ರದೇಶಗಳಿಗೆ ವಿಶೇಷ ಪರಿಗಣನೆ ನೀಡುವ ಮಸೂದೆ ತರಲು ಬಿಜೆಪಿ ಹೊರಟಿದೆ. ಪೌರತ್ವ ಪಟ್ಟಿಯ ವಿರುದ್ಧ ಪ್ರತಿಭಟನೆ ಕಂಡು ಬಂದ ಈಶಾನ್ಯ ರಾಜ್ಯಗಳನ್ನು ಮಸೂದೆಯಿಂದ ಹೊರಗಿಡುವ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಅಂದರೆ ಮುಸ್ಲಿಮರನ್ನು ಮಾತ್ರ ಬಲಿಪಶು ಮಾಡುವ ಅವರ ಹಕ್ಕನ್ನು ಕಸಿಯುವ ಮತ್ತು ತಮಗೆ ಬೇಕಾದವರಿಗೆ ಮಾತ್ರ ಪೌರರಾಗಿ ಗುರುತಿಸುವ ತಾರತಮ್ಯ ಒಟ್ಟಾರೆ ಸಂಶಯಕ್ಕೆ ಕಾರಣವಾಗಿದೆ.ಇದು ಮುಸ್ಲಿಮ್ ವಿರೋಧದ ಮುಂದುವರಿದ ಭಾಗವೆಂದು ಅವರು ಹೇಳಿದರು.