ಬಾಬರಿ ಪ್ರಕರಣದ ತೀರ್ಪಿನ ಹಿನ್ನೆಲೆ: ಚೀಫ್ ಜಸ್ಟಿಸ್ ವಿದೇಶ ಯಾತ್ರೆ ರದ್ದು

0
403

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ,ಅ.17: ನಿವೃತ್ತರಾಗುವ ಮೊದಲು ಅಯೋಧ್ಯೆಯ ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ತೀರ್ಪು ನೀಡುವ ಉದ್ದೇಶದಿಂದ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ವಿದೇಶ ಪ್ರವಾಸ ರದ್ದು ಪಡಿಸಿದರು.

ನವೆಂಬರ್ ಹದಿನೇಳರಂದು ರಂಜನ್ ಗೊಗೊಯಿ ನಿವೃತ್ತರಾಗಲಿದ್ದಾರೆ. ಇದಕ್ಕಿಂತ ಮೊದಲು ತೀರ್ಪು ಹೇಳುವ ಗುರಿಯನ್ನು ಅವರು ಇರಿಸಿಕೊಂಡಿದ್ದಾರೆ. ನಿವೃತ್ತರಾಗುವ ಮೊದಲು ಕೆಲವು ದಕ್ಷಿಣ ಅಮೆರಿಕ ದೇಶಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ಪ್ರವಾಸ ಮಾಡುವವರಿದ್ದರು. ಆದರೆ ಈಗ ತನ್ನ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.

ಹಿಂದೂ-ಮುಸ್ಲಿಂ ವಿಭಾಗಗಳ ನಲ್ವತ್ತು ದಿವಸಗಳ ವಾದವನ್ನು ಆಲಿಸುವುದು ಬುಧವಾರ ಪೂರ್ಣಗೊಂಡಿದೆ. ಚೀಫ್ ಜಸ್ಟಿಸ್ ಅಧ್ಯಕ್ಷತೆ ಐದು ಮಂದಿ ನ್ಯಾಯಾಧೀಶರ ಸುಪ್ರೀಂಕೋರ್ಟು ಪೀಠ ತೀರ್ಪು ನೀಡಲಿಕ್ಕಿದ್ದು ಕಳೆದ ವರ್ಷ ಅಕ್ಟೋಬರಿನಲ್ಲಿ ರಂಜನ್ ಗೊಗೊಯಿ ದೇಶದ 46ನೇ ಚೀಫ್ ಜಸ್ಟಿಸ್ ಆಗಿ ಹೊಣೆ ವಹಿಸಿಕೊಂಡಿದ್ದರು. ಗೊಗೊಯಿ ಅವರ ಕೊನೆಯ ಕೆಲಸದ ದಿವಸ ನವೆಂಬರ್ ಹದಿನೈದರೊಳಗೆ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ತನ್ನ ನಿವೃತ್ತಿಯ ಮೊದಲು ತೀರ್ಫು ನೀಡುವುದಾಗಿ ಅವರು ಈಗಾಗಲೇ ಹೇಳಿದ್ದಾರೆ.