ಮೊದಲು ಯೋಗಿ ವ್ಯಾಕ್ಸಿನ್ ಸ್ವೀಕರಿಸಲಿ, ಅದಲ್ಲವೇ ಹೀರೋಯಿಸಂ: ಪಿಸಿಸಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು

0
151

ಸನ್ಮಾರ್ಗ ವಾರ್ತೆ

ಲಕ್ನೊ,ಜ.16: ಉತ್ತರಪ್ರದೇಶದ ಮುಖ್ಯಮಂತ್ರಿ ಮೊದಲು ಕೊರೋನ ವ್ಯಾಕ್ಸಿನ್ ಸ್ವೀಕರಿಸಲಿ ಎಂದು ಪಿಸಿಸಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ. ವ್ಯಾಕ್ಸಿನ್ ಕುರಿತ ತಪ್ಪಾಭಿಪ್ರಾಯಗಳನ್ನು ದೂರಮಾಡಿ ಜನರಿಗೆ ಅದು ಧೈರ್ಯ ಕೊಟ್ಟೀತು. ಜನರಿಗೆ ಉಚಿತ ವೈರಸ್ ಇಂಜೆಕ್ಷನ್ ನೀಡಬೇಕೆಂದೂ ಅವರು ಆಗ್ರಹಿಸಿದರು.

ವ್ಯಾಕ್ಸಿನನ್ನು ಸ್ವಾಗತಿಸುತ್ತೇನೆ. ಅದನ್ನು ತಯಾರಿಸಿದ ವಿಜ್ಞಾನಿಗಳಿಗೆ ಕೃತಜ್ಞತೆಗಳು. ಮಹಾಮಾರಿ ವೇಳೆ ಜನರಿಗೆ ಸಹಕರಿಸುವುದು ಯಾವುದೇ ಸರಕಾರದ ಕರ್ತವ್ಯವಾಗಿದೆ. ಈಗ ವ್ಯಾಕ್ಸಿನ್ ಬಂದಿದೆ ಅದನ್ನು ಉಚಿತವಾಗಿ ಜನರಿಗೆ ಕೊಡಿ. ಜೊತೆಗೆ ವ್ಯಾಕ್ಸಿನ್ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವೀಕರಿಸಬೇಕು. ಹಾಗಾದರೆ ಮಾತ್ರ ಜನರಲ್ಲಿರುವ ಭಯ ದೂರವಾದೀತು ಎಂದು ಇಂಡಿಯನ್ ಎಕ್ಸ್‌ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ಲಲ್ಲು ಹೇಳಿದರು.

ಸಮಾಜವಾದಿ ಪಾರ್ಟಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಬಿಜೆಪಿಯ ವ್ಯಾಕ್ಸಿನ್ ತಾನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಿಜ್ಞಾನಿಗಳ ಸಾಮರ್ಥ್ಯದಲ್ಲಿ ಪೂರ್ಣ ವಿಶ್ವಾಸ ಇದೆ. ಬಿಜೆಪಿಯ ರಾಜಕೀಯ ವ್ಯಾಕ್ಸಿನ್ ಸ್ವೀಕರಿಸಲು ತಾನು ಸಿದ್ಧನಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.