ಸಿಎಂ ಯಡಿಯೂರಪ್ಪ ಪುತ್ರಿಗೆ ಕೊರೋನ: ಒಂದೇ ದಿನದಲ್ಲಿ 52,531 ಜನರಿಗೆ ಸೋಂಕು; ದೇಶದಲ್ಲಿ ಒಟ್ಟು 18.04 ಲಕ್ಷ ಕೋವಿಡ್ ಪ್ರಕರಣಗಳು

0
322

ಸನ್ಮಾರ್ಗ ವಾರ್ತೆ

ನವದೆಹಲಿ,ಆ.3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿಗೆ ಕೊರೋನ ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಜೆ ತಡವಾಗಿ ಕೊರೋನ ಸೋಂಕು ತಗುಲಿರುವುದು ದೃಢೀಕೃತವಾಗಿತ್ತು.  ಮುಖ್ಯಮಂತ್ರಿಯವರ ಸ್ಥಿತಿ ಉತ್ತಮವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಿಎಂ ಯಡಿಯೂರಪ್ಪ ಭಾನುವಾರ ಟ್ವೀಟ್ ಮಾಡುವ ಮೂಲಕ ಕೊರೋನ ಸೋಂಕು ತಗುಲಿರುವ ಕುರಿತು ಮಾಹಿತಿ ನೀಡಿದ್ದರು.

ಮತ್ತೊಂದೆಡೆ, ಗೃಹ ಸಚಿವ ಅಮಿತ್ ಶಾ ರವರಿಗೂ ಕೂಡ ಕೊರೋನ ಸೋಂಕು ತಗುಲಿರುವುದು ದೃಢವಾಗಿದ್ದು, ಅವರನ್ನು ಗುರಗಾಂವ್‌ನ ಮೇದಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ ದೇಶದ ಕೊರೋನಾ ರೋಗಿಗಳ ಸಂಖ್ಯೆ ಭಾನುವಾರ 18 ಲಕ್ಷ ದಾಟಿದೆ. ಈವರೆಗೆ ದೇಶದಲ್ಲಿ 18,04,702 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಒಂದು ಲಕ್ಷ ಪ್ರಕರಣಗಳು ವರದಿಯಾಗಿರುವುದು ಸತತ 6 ನೆಯ ಬಾರಿಯಾಗಿದೆ. ಈ ಅಂಕಿಅಂಶಗಳು covid19india.org‌ನ್ನು ಆಧರಿಸಿವೆ‌.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.