ಕೊಕೊಕೋಲಾ ಪಾನೀಯ ವಿಶ್ವಸಂಸ್ಥೆಯ ಕಪ್ಪು ಪಟ್ಟಿಗೆ ಸೇರ್ಪಡೆ!

0
243

ನ್ಯೂಯಾರ್ಕ್: ಅತಿಕ್ರಮಿತ ಫೆಲಸ್ತೀನ್‍ನ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಸ್ರೇಲಿನ ಕಂಪೆನಿಗಳನ್ನು ವಿಶ್ವಸಂಸ್ಥೆ ಕಪ್ಪು ಪಟ್ಟಿಯಲ್ಲಿರಿಸಿದೆ. ಬೇಸಿಕ್ ಟೆಲಿಕಮ್ಯೂನಿಕೇಶನ್ಸ್, ತೈವ ಫಾರ್ಮಸ್ಯೂಟಿಕಲ್ ಇಂಡಸ್ಟ್ರೀಡ್, ತಂಪು ಪಾನೀಯಕ್ಕೆ ಪ್ರಸಿದ್ಧಿ ಪಡೆದ ಕೊಕೊಕೋಲಾಗಳಂತಹ ಅಂತಾರಾಷ್ಟ್ರೀಯ ಕಂಪೆನಿಗಳನ್ನು ವಿಶ್ವಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದೆ.

ಮಂಗಳವಾರ ಇಸ್ರೇಲ್ ದೈನಿಕ ಯೆದಿಯೋತ್ ಅರ್ಹನೋತ್ ಈ ಕುರಿತು ವರದಿ ಪ್ರಕಟಿಸಿದ್ದು ಅತಿಕ್ರಮಿತ ವೆಸ್ಟ್‌ ಬ್ಯಾಂಕ್‌ ನಲ್ಲಿ ಅನಧಿಕೃತ ವಲಸೆಗೆ ನೇತೃತ್ವ ನೀಡಿ ಅಲ್ಲಿ ಕಾರ್ಯಾಚರಿಸುತ್ತಿರುವ ಇಸ್ರೇಲಿನ ಅಂತಾರಾಷ್ಟ್ರೀಯ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ 2016ರಲ್ಲಿ ವಿಶ್ವಸಂಸ್ಥೆ ಮಾನವಹಕ್ಕು ಸಭೆ ಒಂದು ಗೊತ್ತುವಳಿಯನ್ನು ಜಾರಿಗೊಳಿಸಿತ್ತು. ಇದೀಗ ಈ ಕಂಪೆನಿಗಳ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.