ನಾವು ನಮ್ಮ ಉದ್ದೇಶಕ್ಕೆ ಸಮಿತಿ ನೇಮಿಸಿದ್ದೇವೆ: ಚೀಫ್ ಜಸ್ಟಿಸ್

0
261

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸುಪ್ರೀಂ ಕೋರ್ಟು ನೇಮಿಸಿದ ಸಮಿತಿಯ ಕುರಿತು ಸಂದೇಹ ವ್ಯಕ್ತಪಡಿಸಿರುವುದರಿಂದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಲ್ಲಿ ರೈತರಿಗೆ ವಿಶ್ವಾಸ ಇರುವವರು ಬೇಕೆಂಬ ಬೇಡಿಕೆಯನ್ನು ಚೀಫ್ ಜಸ್ಟಿಸ್ ಎಸ್.ಎ. ಬೊಬ್ಡೆ ತಳ್ಳಿಹಾಕಿದ್ದು ನಾವು ನಮ್ಮ ಉದ್ದೇಶಕ್ಕೆ ಸಮಿತಿ ನೇಮಿಸಿದ್ದೇವೆ. ಎಲ್ಲರ ಅಭಿಪ್ರಾಯಗಳನ್ನು ತೃಪ್ತಿಪಡಿಸಲಿಕ್ಕಿರುವ ಕಮಿಟಿ ನಾವು ರಚಿಸಿಲ್ಲ ಎಂದು ಚೀರ್ಫ ಜಸ್ಟಿಸ್ ಹೇಳಿದರು.

ಮಾಜಿ ಸುಪ್ರೀಂ ಕೋರ್ಟ್ ಜಡ್ಜ್ ಮಾಕಂಡೇಯ ಖಟ್ಜು, ಕುರ್ಯನ್ ಜೋಸೆಫ್‍ರನ್ನು ಸಮಿತಿಯ ಸದಸ್ಯರನ್ನಾಗಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ಬೇಡಿಕೆಯಾಗಿದ್ದು ಇದನ್ನು ಚೀಫ್ ಜಸ್ಟಿಸ್ ಒಪ್ಪಿಲ್ಲ. ಭಾರತೀಯ ಕಿಸಾನ್ ಯೂನಿಯನ್ ವಿಭಾಗದ ಪರ ಹಾಜರಾದ ಅಡ್ವೋಕೇಟ್ ಎಪಿ ಸಿಂಗ್ ಸಮಿತಿ ರಚಿಸುವಾಗ ರೈತರ ಅಭಿಪ್ರಾಯವನ್ನು ಪರಿಗಣಿಸಬೇಕೆಂದು ಹೇಳಿದ್ದರು. ಲರೈತರ ವಿಶ್ವಾಸ ಗಳಿಸದ ಸಮಿತಿಯು ಯಶಸ್ಸು ಪಡೆಯುವುದಿಲ್ಲ ಎಂದು ಅವರು ವಾದಿಸಿದರು. ಸಮಸ್ಯೆ ಪರಿಹರಿಸಲು ಸುಪ್ರೀಂಕೋರ್ಟು ಬಯಸುವುದಾದರೆ ಅವರಿಗೂ ಸ್ವೀಕಾರಾರ್ಹರನ್ನು ಸಮಿತಿಯಲ್ಲಿರಿಸಬೇಕೆಂದು ಅವರು ವಾದಿಸಿದರು.

ಜೆ. ಮಾರ್ಕಂಡೇಯ ಖಟ್ಜು, ಜೆ.ಕುರಿಯನ್ ಜೋಸೆಫ್‍ರನ್ನು ಸಮಿತಿಯಲ್ಲಿ ಸೇರಿಸಬೇಕೆಂದು ಸಿಂಗ್ ಹೇಳಿದರು. ಉತ್ತಮ ಎಂದು ಎಲ್ಲರೂ ಹೇಳುವ ಸಮಿತಿ ರಚಿಸಲು ಸಾಧ್ಯವಿಲ್ಲ ಎಂಬುದನ್ನು ನೀವು ಮನಗಾಣಬೇಕು. ನಮ್ಮ ಉದ್ದೇಶಕ್ಕಾಗಿ ನಾವು ಸಮಿತಿ ರಚಿಸಿದ್ದೇವೆ ಎಂದು ಚೀಫ್ ಜಸ್ಟಿಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here