ಕಾಂಗ್ರೆಸ್ ಪತನದಂಚಿನಲ್ಲಿದೆ; ರಾಷ್ಟ್ರಮಟ್ಟದಲ್ಲಿ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಇದೆ- ಸಿಎಂ ಕೇಜ್ರಿವಾಲ್

0
256

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.21: ರಾಷ್ಟ್ರಮಟ್ಟದಲ್ಲಿ ಹೊಸ ಪರ್ಯಾಯ ಪಕ್ಷದ ಅಗತ್ಯೆ ಇದೆ. ಕಾಂಗ್ರೆಸ್ ಪತನದಂಚಿನಲ್ಲಿದೆ ಎಂದು ಎಎಪಿ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. “ಕಾಂಗ್ರೆಸ್ ಪತನವಾಗಿದೆ ಅಥವಾ ಪತನಗೊಳ್ಳುತ್ತಿದೆ. ಕಾಂಗ್ರೆಸ್‍ಗೆ ಒಡೆಯನಿಲ್ಲ. ಬಿಜೆಪಿಯಲ್ಲಿ ಅಸಂತೃಪ್ತರು ಕಾಂಗ್ರೆಸ್‍ಗೆ ವೋಟು ಹಾಕುತ್ತಾರೆ. ಆದರೆ, ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಸಹಕರಿಸಿ ಸರಕಾರ ರಚಿಸಬಹುದು. ನಮಗೆ ಕಾಂಗ್ರೆಸ್ಸಿನ ಬದಲು ರಾಷ್ಟ್ರಮಟ್ಟದಲ್ಲಿ ಹೊಸ ಬದಲಿಯು ಬೇಕಾಗಿದೆ ಎಂದು ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ದಿಲ್ಲಿ ಸರಕಾರ ದೀಪಾವಳಿ ಲಕ್ಷ್ಮಿ ಪೂಜೆ ನಡೆಸುವುದು ಮೃದು ಹಿಂದುತ್ವವಲ್ಲವೇ ಎಂಬ ಪ್ರಶ್ನೆಗೆ “ಪೂಜೆ ಮಾಡುವುದನ್ನು ಜನರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗುವುದಿಲ್ಲ. ಭಕ್ತಿ ಒಂದು ಒಳ್ಳೆಯ ಕಾರ್ಯವಾಗಿದೆ. ನಿಮ್ಮ ಲಿಬರಲ್ ಗೆಳೆಯರೊಂದಿಗೆ ಪೂಜೆ ಮಾಡಲು ಹೇಳಿ. ಅವರಿಗೂ ಒಳ್ಳೆಯ ಶಾಂತಿ ಸಿಗಬಹುದು” ಎಂಬುದಾಗಿ ಕೇಜ್ರಿವಾಲ್ ಉತ್ತರಿಸಿದ್ದಾರೆ.

ಹಿಂದುಸ್ತಾನ್ ಟೈಮ್ಸ್ ಲೀಡರ್ಸ್ ಸಮಿಟ್‍ನಲ್ಲಿ ಕೇಜ್ರಿವಾಲ್ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.