ಪುದುಚೇರಿ: ವಿಶ್ವಾಸ ಮತ ಯಾಚನೆಗೆ ಸಿದ್ಧವಾದ ಕಾಂಗ್ರೆಸ್

0
341
ಸ್ಲೇಟು ಹಿಡಿದು ರಾಷ್ಟ್ರಪತಿಯವರೊಡನೆ ಮನವಿ ಮಾಡಿದ ಶಬ್ನಮ್ ರ 12 ವರ್ಷದ ಪುತ್ರ ತಾಜ್

ಸನ್ಮಾರ್ಗ ವಾರ್ತೆ

ಚೆನ್ನೈ,ಫೆ.19: ಪುದುಚೇರಿಯ ವಿಧಾನಸಭೆಯ ಚುನಾವಣೆಯ ಕುರಿತು ಪ್ರಕಟಣೆ ಹೊರಡಲು ಕೆಲವೇ ದಿನಗಳು ಉಳಿದಿರುವಂತೆ ವಿಶ್ವಾಸ ಮತಯಾಚನೆಗೆ ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರ ಸಜ್ಜಾಗಿದೆ. ಕಾಂಗ್ರೆಸ್ಸಿನ ನಾಲ್ವರು ಶಾಸಕರು ನಾಟಕೀಯವಾಗಿ ರಾಜೀನಾಮೆ ನೀಡಿದ್ದ ಸರಕಾರ ಬಹುಮತದ ಕೊರತೆ ಎದುರಿಸುತ್ತಿದ್ದು ಈಗ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ತಲಾ 14 ಸೀಟುಗಳನ್ನು ಹೊಂದಿವೆ. ಬಹುಮತ ಸಾಬೀತು ಪಡಿಸಲು ಹದಿನೈದು ಶಾಸಕರ ಅಗತ್ಯವಿದೆ.

ನಾರಾಯಣ ಸ್ವಾಮಿಯ ಕಾಂಗ್ರೆಸ್, ಡಿಎಂಕೆ ಮೈತ್ರಿಕೂಟದ ಸರಕಾರ ಬಹುಮತ ಕಳೆದುಕೊಂಡಿದೆ. ವಿಧಾಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬೇಕೆಂದು ಆಗ್ರಹಿಸಿ ಎನ್‍ಆರ್ ಕಾಂಗ್ರೆಸ್ ನಾಯಕ ರಂಗಸ್ವಾಮಿ ನೇತೃತ್ವದ ಪ್ರತಿಪಕ್ಷ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಆಧಾರದಲ್ಲಿ ಫೆಬ್ರುವರಿ 22ಕ್ಕೆ ವಿಶ್ವಾಸ ಮತಯಾಚನೆ ಕೇಳಲು ಪುದುಚೇರಿಯ ಹೊಸ ಉಪ ರಾಜ್ಯಪಾಲರು ಆದೇಶಿಸಿದ್ದಾರೆ.

ರಾಜ್ಯಪಾಲರನ್ನು ರಾಜಭವನದಲ್ಲಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಮತ್ತು ಪ್ರತಿಪಕ್ಷ ನಾಯಕರು ಭೇಟಿಯಾಗಿತ ಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತ ಎದುರಿಸಲು ಆಡಳಿತ ಪಕ್ಷ ತೀರ್ಮಾನಿಸಿದ್ದು ಉಪರಾಜ್ಯಪಾಲರ ಆಡಳಿತದಲ್ಲಿ ವಿಧಾನಸಭೆಗೆ ಚುನಾವಣೆ ನಡೆಸಲು ಬಿಜೆಪಿ ಬಯಸುತ್ತಿದೆ ಎಂದು ರಾಜಕೀಯ ನಿರೀಕ್ಷರು ಹೇಳುತ್ತಿದ್ದಾರೆ.