ಮಹಾರಾಷ್ಟ್ರ ರಾಜಕೀಯ: ಬಿಜೆಪಿಯಿಂದ ಶಾಸಕರಿಗೆ 50 ಕೋಟಿ ರೂ. ನೀಡುವ ಆಮಿಷ- ಕಾಂಗ್ರೆಸ್ ಆರೋಪ

0
324

ಸನ್ಮಾರ್ಗ ವಾರ್ತೆ

ಮುಂಬೈ,ನ.8: ರಾಜಕೀಯ ಬಿಕ್ಕಟ್ಟು ಮುಂದುವರಿಯುತ್ತಿದ್ದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಹಿತ ಶಾಸಕರನ್ನು ತಮ್ಮ ಪರ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ವಿಜಯ್ ವಾಡೆತವಾನ್ ಆರೋಪಿಸಿದ್ದಾರೆ.

ಐವತ್ತು ಕೋಟಿ ರೂಪಾಯಿ ಶಿವಸೇನೆ ಶಾಸಕರಿಗೆ ಬಿಜೆಪಿಯೊಂದಿಗೆ ಸಂಬಂಧಿಸಿದವರು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರಿಗೂ ನಿರಂತರ ಫೋನ್ ಕರೆಗಳು ಬರುತ್ತಿವೆ ಎಂದು ಅವರು ಹೇಳಿದರು. ಪಾರ್ಟಿ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚವ್ವಾನ್ ಹೇಳಿದ್ದಾರೆ.

44 ಕಾಂಗ್ರೆಸ್ ಶಾಸಕರು ಈಗ ಮುಂಬೈಯಲ್ಲಿದ್ದಾರೆ. ಶಿವಸೇನೆ ತಮ್ಮ 56 ಶಾಸಕರನ್ನು ಬೆಂಬಲ ಸೂಚಿಸಿದ ಒಂಬತ್ತು ಪಕ್ಷೇತರರನ್ನು ನಗರದ ಹೊಟೇಲಿನಲ್ಲಿರಿಸಿದೆ. ಬಿಜೆಪಿ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ತಮ್ಮ ಶಾಸಕರಿಂದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರತಿಜ್ಞೆ ಮಾಡಿಸಿದ್ದರು.

ಶಾಸಕರು ಬಿಜೆಪಿಗೆ ಹೋದರೆ ಮುಂದಿನ ಚುನಾವಣೆಯಲ್ಲಿ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸಿ ಅವರನ್ನು ಎದುರಿಸಲಿದೆ ಎಂದು ಮುನ್ನೆಚ್ಚರಿಕೆಯನ್ನು ಕೂಡ ನೀಡಲಾಗಿದೆ.