ಶ್ರೀಮಂತ ಗೆಳೆಯರಿಗೆ ಲಾಭ ಮಾಡಿಕೊಡಲಿಕ್ಕಾಗಿ ಬಿಜೆಪಿ ಬಡವರ ಕಿಸೆಗೆ ಕನ್ನ ಹಾಕುತ್ತಿದೆ- ಪ್ರಿಯಾಂಕಾ ಗಾಂಧಿ

0
297

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 2: ಖಾಸಗಿ ಕ್ಷೇತ್ರದ ಪ್ರಮುಖ ಮೊಬೈಲ್ ಸೇವಾದಾತ ಕಂಪೆನಿಗಳು ಇಂಟರ್‍ನೆಟ್ ಮತ್ತು ಫೋನ್ ಕರೆಗಳಿಗೆ ಹಣ ಹೆಚ್ಚಿಸಿದ್ದರ ಕುರಿತು ಪ್ರತಿಕ್ರಿಯೇ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಜೆಪಿ ತನ್ನ ಶ್ರೀಮಂತ ಗೆಳೆಯರ ಕಿಸೆ ಗಟ್ಟಿ ಮಾಡಲು ಬಡವರ ಕಿಸೆಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಕಳೆದ ಆರು ವರ್ಷಗಳಿಂದ ಅಗ್ಗದ ಮೊಬೈಲ್ ಇಂಟರ್ನೆಟ್ ಎಂದು ಹೇಳುತ್ತಲಿತ್ತು. ಈಗ ಅದರ ಗಾಳಿ ಹೋಗಿದೆ. ಬಿಜೆಪಿ ಬಿಎಸ್ಸೆನ್ನೆಲ್ ಮತ್ತು ಎಂಟಿ ಎನ್ನೆಲ್ ಅನ್ನು ದುರ್ಬಲಗೊಳಿಸಿ ಉಳಿದ ಕಂಪೆನಿಗಳಿಗೆ ಕರೆಗಳು ಮತ್ತು ಡಾಟವನ್ನು ದುಬಾರಿಗೊಳಿಸುವ ಅವಕಾಶ ಒದಗಿಸಿಕೊಟ್ಟಿದೆ. ಬಿಜೆಪಿ ತಮ್ಮ ಗೆಳೆಯರಿಗೆ ಲಾಭ ಮಾಡಿಕೊಡಲು ಹೀಗೆಲ್ಲ ಮಾಡುತ್ತಿದೆ. ಬಡವರ ಜೇಬು ಕತ್ತರಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.