ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ ವಿರೋಧಿಸುವುದಿಲ್ಲ- ಕೆ.ಮುರಳೀಧರನ್

0
606

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್,ಆ.3: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಕಾಂಗ್ರೆಸ್‌ನ ವಿರೋಧವಿಲ್ಲ ಎಂದು ಕೇರಳದ ಸಂಸದ ಕೆ.ಮುರಳೀಧರನ್ ಹೇಳಿದ್ದಾರೆ.

ಮಸೀದಿ ಕೆಡವಿ ರಾಮಮಂದಿರ ಕಟ್ಟುವುದನ್ನು ಕಾಂಗ್ರೆಸ್ ವಿರೋಧಿಸಿದ್ದು, ಕಾಂಗ್ರೆಸ್ ರಾಷ್ಟ್ರೀಯ ನೀತಿಯನ್ನು ಸೋನಿಯಾ ಗಾಂಧಿ ವ್ಯಕ್ತಪಡಿಸಬೇಕಿದೆ. ಬೇರೆ ಯಾರ ಮಾತಿಗೂ ಗಮನ ಕೊಡಬೇಕಾದ ಅಗತ್ಯವಿಲ್ಲ ಎಂದು ಮುರಳೀಧರನ್ ಹೇಳಿದರು.

ರಾಮಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‍ನ ನಿಲುವನ್ನು ತಿಳಿಯಲು ಲೀಗ್ ಕಾಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಎಂಕೆ ಮುನೀರ್ ಹೇಳಿದರು. ನಿಲುವನ್ನು ರಾಹುಲ್ ಅಥವಾ ಸೋನಿಯಾ ಹೇಳಬೇಕು. ಜಾತ್ಯತೀತ ನಿಲುವಿನಿಂದ ಕಾಂಗ್ರೆಸ್ ಹೊರ ಹೋದೀತೆಂದು ಭಾವಿಸುವುದಿಲ್ಲ ಎಂದು ಮುನೀರ್ ಹೇಳಿದರು.

ರಾಮಮಂದಿರ ಪರವಾಗಿ ಕಮಲ್‍ನಾಥ್ ಮತ್ತು ದಿಗ್ವಿಜಯ ಸಿಂಗ್ ಸಹಿತ ಹಿರಿಯ ನಾಯಕರು ನಿಲುವು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸುವ ಕಾಂಗ್ರೆಸ್ ನಾಯಕರ ವಿರುದ್ಧ ಕೇರಳದ ಸಮಸ್ತ ರಂಗ ಪ್ರವೇಶಿಸಿದೆ.

ಕಾಂಗ್ರೆಸ್‍ನಿಂದ ಜಾತ್ಯತೀತ ಸಮುದಾಯ ನಿರೀಕ್ಷಿಸದೇ ಇದ್ದುದು ನಡೆಯುತ್ತಿದೆ. ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಿಸುವುದನ್ನು ಪ್ರಶಂಸಿ ಕಾಂಗ್ರೆಸ್ ನಾಯಕರು ರಂಗ ಪ್ರವೇಶಿಸಿದ್ದಾರೆ. ಜಾತ್ಯತೀತ ಪ್ರಜಾಪ್ರಭುತ್ವವಾದಿಗಳಿಗೆ ನೋವು ತರಿಸುವುದು ಇದಾಗಿದೆ ಎಂದು ಸಮಸ್ತದ ಮುಖವಾಣಿ ಸುಪ್ರಭಾತದ ಸಂಪಾದಕೀಯ ಹೇಳಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.