ಉತ್ತರ ಪ್ರದೇಶದಲ್ಲಿ ನಕಲಿ ಮದ್ಯ, ಕಳ್ಳಭಟ್ಟಿ ಸೇವನೆ: 6 ಮಂದಿ ಸಾವು,15 ಮಂದಿ ಆಸ್ಪತ್ರೆಗೆ ದಾಖಲು

0
182

ಸನ್ಮಾರ್ಗ ವಾರ್ತೆ

ಲಕ್ನೊ,ನ.21: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಹದಿನೈದು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶುಕ್ರವಾರ ಪ್ರಯಾಗ್ ರಾಜ್‍ನ ಅಮೀಲಿಯ ಗ್ರಾಮದಲ್ಲಿ ಕಳ್ಳಭಟ್ಟಿ ದುರಂತ ಸಂಭವಿಸಿದೆ. ಗುರುವಾರ ರಾತ್ರೆ ಮದ್ಯದಂಗಡಿಯಿಂದ ಮದ್ಯ ತಂದು ಕುಡಿದವರು ಮೃತಪಟ್ಟಿದ್ದಾರೆ. ಮದ್ಯ ಸೇವಿಸಿದವರಿಗೆ ಅಸೌಖ್ಯ ತಲೆದೋರಿತು ಎಂದು ಸ್ಥಳೀಯರು ಹೇಳಿದರು.

ಪ್ರಾಥಮಿಕ ಸಾಕ್ಷ್ಯಗಳ ಆಧಾರದಲ್ಲಿ ಮದ್ಯದಂಗಡಿ ಇಟ್ಟುಕೊಂಡಿದ್ದ ಪತಿ, ಪತ್ನಿಯರನ್ನು ಪೊಲೀಸರು ಬಂಧಿಸಿದರು. ಆರು ಮಂದಿಯ ಸಾವಿನ ಕಾರಣವನ್ನು ಪೋಸ್ಟ್‌ಮಾರ್ಟಂ ವರದಿ ಲಭಿಸಿದ ಮೇಲೆ ಸ್ಪಷ್ಟಪಡಿಸಬಹುದೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾನು ಚಂದ್ರ ಗೋಸ್ವಾಮಿ ಹೇಳಿದರು. ಮದ್ಯದ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.