ಲಾಕ್ ಡೌನ್ 21 ದಿವಸ ಮುಂದುವರಿಯಲಿ- ಇಂಡಿಯನ್ ಮೆಡಿಕಲ್ ಅಸೋಸಿಯೇಶನ್

0
342

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಎ. 7: ಕೊರೊನ ಹರಡದಂತೆ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್ ಈಗಿನ ಅವಧಿಯ ನಂತರ ಪುನಃ 21 ದಿವಸ ಮುಂದುವರಿಯಲಿ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಆಗ್ರಹಿಸಿದೆ. ಈ ಕುರಿತು ಅಸೋಸಿಯೇಶನ್ ಕೇರಳ ಮುಖ್ಯಮಂತ್ರಿಗೆ ಪತ್ರ ನೀಡಿದೆ ಎಂದು ಕೇರಳ ವಿಭಾಗದ ಅಧ್ಯಕ್ಷ ಡಾ. ಎಬ್ರಾಹಾಂ ವರ್ಗಿಸ್, ಕಾರ್ಯದರ್ಶಿ ಡಾ. ಗೋಪಿಕುಮಾರ್ ಹೇಳಿದರು.

ದೇಶ, ಅಂತಾರಾಷ್ಟ್ರೀಯ ಮಟ್ಟದ ತಜ್ಞರೊಂದಿಗೆ ಕೆಲವು ದಿವಸಗಳಿಂದ ನಡೆಯುತ್ತಿರುವ ಚರ್ಚೆಯ ಕೊನೆಯಲ್ಲಿ ಲಾಕ್ ಮುಂದುವರಿಸುವ ಶಿಫಾರಸ್ಸಿಗೆ ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಶನ್) ಮುಂದಾಯಿತು. ಈಗಿನ ಲಾಕ್ ಡೌನ್ ಅವಧಿ ಎಪ್ರಿಲ್ 14ಕ್ಕೆ ಕೊನೆಗೊಳ್ಳುವುದು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.