ಅಮೇರಿಕ: ಪ್ರಾರ್ಥನೆ ಮಾಡಿದ್ದಕ್ಕಾಗಿ ಸಹ ರೋಗಿಯನ್ನೇ ಕೊಂದ ಕೊರೋನಾ ರೋಗಿ

0
396

ಸನ್ಮಾರ್ಗ ವಾರ್ತೆ

ಅಮೇರಿಕ: ಕೊರೋನಾ ರೋಗಿಯೋರ್ವ ತನ್ನ ಕೊಠಡಿಯಲ್ಲಿ ದಾಖಲಾಗಿದ್ದ ಸಹ ರೋಗಿಯೋರ್ವ ಪ್ರಾರ್ಥನೆ ಮಾಡಿದ ಎಂದು ಆರೋಪಿಸಿ ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಟ್ಯಾಂಕ್ ನಿಂದ ಹೊಡೆದು ಕೊಂದ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಲ್ಯಾಂಕಾಸ್ಟರ್‌ನ ಆಂಟೆಲೋಪ್ ವ್ಯಾಲಿ ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಆಸ್ಪತ್ರೆಯ ಕೊಠಡಿಯನ್ನು ಹಂಚಿಕೊಂಡಿದ್ದ 82 ವರ್ಷದ ವ್ಯಕ್ತಿಯು ಕೊಠಡಿಯಲ್ಲಿ ಪ್ರಾರ್ಥನೆ ಮಾಡಲು ಪ್ರಾರಂಭಿಸಿದಾಗ 37 ವರ್ಷದ ಜೆಸ್ಸಿ ಮಾರ್ಟಿನೆಝ್ ಅಸಮಾಧಾನಗೊಂಡು ಆಕ್ಸಿಜನ್ ಟ್ಯಾಂಕ್ ನಿಂದ ಹೊಡೆದಿದ್ದು, ಮರುದಿನ ಆತ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜೆಸ್ಸಿ ಮಾರ್ಟಿನೆಝ್ ನನ್ನು ಬಂಧಿಸಿ ಕೊಲೆ, ದ್ವೇಷದ ಅಪರಾಧ ಮತ್ತು ಹಿರಿಯರ ನಿಂದನೆ ಆರೋಪ ಹೊರಿಸಿ ಕೇಸು ದಾಖಲಿಸಿರುವುದಾಗಿ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.