ಎನ್‍ಐಎ; ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸು

0
633

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 20: ರಾಷ್ಟ್ರೀ ಸುರಕ್ಷಾ ಕಾನೂನಿನಲ್ಲಿ (ಎನ್‍ಐಎ) ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟು ನೋಟಿಸು ಜಾರಿ ಮಾಡಿದೆ. ಕಾನೂನಿನನ ಅಸ್ಪಷ್ಟತೆಯನ್ನು ಸ್ಪಷ್ಟಪಡಿಸಬೇಕೆಂದು ಜಸ್ಟಿಸ್ ಆರ್.ಎಫ್ ನಾರಿಮನ್ ಅಧ್ಯಕ್ಷತೆಯ ಪೀಠ ಹೇಳಿದೆ. ನೋಟಿಸಿಗೆ ಉತ್ತರಿಸಲು ನಾಲ್ಕುವಾರದ ಸಮಯವನ್ನು ಕೇಂದ್ರ ಸರಕಾರಕ್ಕೆ ಕೋರ್ಟು ನೀಡಿದೆ. ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ಸಲ್ಲಿಸಿದ ಅರ್ಜಿಯಲ್ಲಿ ಕೋರ್ಟು ಈ ಕ್ರಮ ಜರಗಿಸಿದೆ.

ಎನ್‍ಐಎ ಕಾನೂನು ಸಂಬಂಧಿಸಿ ಸ್ಪಷ್ಟತೆಯಿಲ್ಲ. ದೇಶದ ಸುರಕ್ಷೆಯನ್ನು ಬಾಧಿಸುತ್ತದೆ ಎಂದು ಕಾನೂನಿನ ಕಡೆಯಿಂದ ಏನೆಲ್ಲ ಇದೆ ಎಂದು ವಿವರಿಸಲಾಗಿಲ್ಲ. ಇದನ್ನು ಸೂಚಿಸಿ ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯದ ಅನುಮತಿಯಿಲ್ಲದ ಕೇಸು ಹಾಕಲು, ತನಿಖೆ ನಡೆಸಲು ಎನ್‍ಐಎಗೆ ಅನುಮತಿ ನೀಡಿದ್ದು ಫೆಡರಲ್ ವ್ಯವಸ್ಥೆಯ ಮೇಲಿನ ಅತಿಕ್ರಮಣವಾಗಿದೆ. ಕಾನೂನಿಗೆ ತಂದಿರುವ ತಿದ್ದುಪಡಿ ಸಂವಿಧಾನ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.