ಒಂದೇ ದಿನದಲ್ಲಿ 22,721ಜನರಿಗೆ ಸೋಂಕು ದೃಢ; ದೇಶದಲ್ಲಿ ಒಟ್ಟು 6,49,889 ಕೊರೋನ ಪ್ರಕರಣಗಳು

0
113

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.4: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 6,49,889ಕ್ಕೆ ಏರಿದೆ. ಶುಕ್ರವಾರ, ದಾಖಲೆಯ 22,721 ಸೋಂಕಿತರು ಹೆಚ್ಚಾಗಿದ್ದು, 14,417 ಕ್ಕೂ ಹೆಚ್ಚು ಸೋಂಕಿತರು ಗುಣಮುಖವಾಗಿದ್ದಾರೆ.

ಈ ಅವಧಿಯಲ್ಲಿ, ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 6364 ಪ್ರಕರಣಗಳು ಹೆಚ್ಚಿವೆ. ಈ ಅಂಕಿಅಂಶಗಳು covid19india.orgನ್ನು ಆಧರಿಸಿವೆ.

ಇದುವರೆಗೆ ದೇಶದಲ್ಲಿ 3.86 ಲಕ್ಷ ರೋಗಿಗಳನ್ನು ಗುಣಪಡಿಸಲಾಗಿದೆ. ಶುಕ್ರವಾರ, ಚೇತರಿಕೆ ದರವು 60% ದಾಟಿದೆ. ಇಲ್ಲಿಯವರೆಗೆ ದೇಶದ 60.73% ರೋಗಿಗಳು ಆರೋಗ್ಯವಾಗಿದ್ದಾರೆ. ಕಳೆದ 10 ದಿನಗಳಲ್ಲಿ ಚೇತರಿಕೆ ದರವು 4% ಹೆಚ್ಚಾಗಿದೆ. ಜೂನ್ 24 ರಂದು, ಚೇತರಿಕೆ ಪ್ರಮಾಣ 56% ಆಗಿತ್ತು.

ಓದುಗರೇ, ಸನ್ಮಾರ್ಗ  ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.