ಮಕ್ಕಳಿಗೆ ಪಾಠವೂ ಇಲ್ಲ ಊಟವೂ ಇಲ್ಲ: ಕೊಳೆಯುತ್ತಿರುವ ಅಕ್ಕಿ, ಸಾಂಬಾರ ಪದಾರ್ಥ- ಇದು ಕರುನಾಡಿನ ಕೊರೋನ ಸಂಕಷ್ಟ

0
108

ಸನ್ಮಾರ್ಗ ವಾರ್ತೆ

ಕೊರೋನಾದಿಂದಾಗಿ ಶಾಲೆಗಳನ್ನು ಮುಚ್ಚಿದ್ದರಿಂದ ಮಧ್ಯಾಹ್ನದ ಬಿಸಿಯೂಟದ ಅಕ್ಕಿ, ತೊಗರಿ ಬೇಳೆಯನ್ನು
ಮನೆ ಮನೆಗೆ ಹಂಚಿಕೆ ಮಾಡಲು ಸರಕಾರ ನಿರ್ಧರಿಸಿದ್ದರೂ
ಅದು ಸರಿಯಾಗಿ ಹಂಚಿಕೆಯಾಗದೇ ಉಗ್ರಾಣಗಳಲ್ಲಿ ಕೊಳೆಯುತ್ತಿರುವ ಸುದ್ದಿ ವರದಿಯಾಗಿದೆ.

ಒಂದರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 100 ಗ್ರಾಮ್ ಅಕ್ಕಿ, 50 ಗ್ರಾಂ ಬೇಳೆ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಮ್ ಅಕ್ಕಿ ಮತ್ತು 75 ಗ್ರಾಂ ಬೇಳೆಯನ್ನು ನೀಡುವುದು
ಸರಕಾರಿ ಆದೇಶವಾಗಿದೆ.

ಆದರೆ ಅಕ್ಷರದ ದಾಸೋಹದಡಿ ವಿತರಿಸಬೇಕಿದ್ದ ಸಾವಿರಾರು ಕ್ವೀoಟಾಲ್ ಬೇಳೆ ಮತ್ತು ಅಕ್ಕಿಯು ಉಗ್ರಾಣದಲ್ಲಿ ಕೊಳೆಯುತ್ತಿದೆ. ಸಂಕಷ್ಟದ ಕಾಲದಲ್ಲಿ ಮಕ್ಕಳ ಹೊಟ್ಟೆ ತುಂಬಿಸಬೇಕಾದ ಧಾನ್ಯ ಹುಳು ಹಿಡಿಯುವ ಅಪಾಯ ಎದುರಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here