ಮಗನ ಮದುವೆಗೆ ಬಂದ 113 ಮಂದಿಗೆ ಕೊರೋನ: ತಂದೆಯ ಮೇಲೆ ಕೇಸು

0
1021

ಸನ್ಮಾರ್ಗ ವಾರ್ತೆ

ಪಾಟ್ನ,ಜು.3: ಕೊರೋನ ಬಾಧೆಯಿಂದ ಮದುಮಗ ಮೃತಪಟ್ಟಿರುವ ಘಟನೆಯಲ್ಲಿ 113 ಮಂದಿ ಕೊರೋನ ಸೋಂಕಿತರಾಗಿದ್ದಾರೆ. ಇವರೆಲ್ಲ ಮದುವೆಯಲ್ಲಿ ಭಾಗವಹಿಸಿದವರು. ಇದಕ್ಕೆ ಸಂಬಂಧಿಸಿ ತಂದೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೊರೋನದಿಂದ ಮೃತಪಟ್ಟ ವರ ಅನಿಲ್‍ಕುಮಾರನ ತಂದೆ ಅಂಬಿಕಾ ಚೌಧರಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಹಾರದ ಪಾಟ್ನದ ದಿಹ್‍ಪಾಲಿ ಗ್ರಾಮದಲ್ಲಿ ಜೂನ್ 15ರಂದು ಸಾಮಾಜಿಕ ಅಂತರ ಪಾಲಿಸದೇ ಮಾಸ್ಕ್ ಧರಿಸದೆರ ಕೊರೋನ ನಿಯಂತ್ರಣ ಪಾಲಿಸದೆರ ಮದುವೆ ಕಾರ್ಯಕ್ರಮ ನೆರವೇರಿತ್ತು.

ಹರಿಯಾಣದ ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅನಿಲ್ ಕುಮಾರ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಮೇ 12ಕ್ಕೆ ಬಾಡಿಗೆ ಕಾರಿನಲ್ಲಿ ಊರಿಗೆ ಬಂದಿದ್ದರು.

ಅನಿಲ್ ಕುಮಾರ್‌ಗೆ ಮದುವೆ ಆಗಿ ಎರಡು ದಿವಸದ ಬಳಿಕವಷ್ಟೇ ಆರೋಗ್ಯ ಸ್ಥಿತಿ ಕೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಮೃತಪಟ್ಟಿದ್ದಾರೆ. ಜಿಲ್ಲಾ ಆಡಳಿತಕ್ಕೆ ತಿಳಿಸದೆಯೇ ಶವಸಂಸ್ಕಾರವನ್ನೂ ಮಾಡಲಾಗಿತ್ತು. ಈವರೆಗೂ ಮದುಮಗಳಿಗೆ ಕೊರೋನ ದೃಢಪಟ್ಟಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.