ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಕೋವಿಡ್ ಆರೋಪಿ

0
406

ಸನ್ಮಾರ್ಗ ವಾರ್ತೆ

ಭೋಪಾಲ,ಜು.8: ಮಧ್ಯಪ್ರದೇಶದ ಗ್ವಾಲಿಯಾರಿನಲ್ಲಿ ಕಳ್ಳತನ ಕೇಸಿನಲ್ಲಿ ಸೆರೆಯಾಗಿದ್ದ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಸಿಕೊಂಡಿದ್ದಾನೆ. ಇತನ ಕೊರೋನ ಟೆಸ್ಟ್ ವರದಿಯು ನಿನ್ನೆ ಬಂದಿದ್ದು, ಪಾಸಿಟಿವ್ ಎಂದು ದೃಢಪಡಿಸಿತ್ತು. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪೊಲೀಸರ ಕೈಯಿಂದ ಪರಾರಿಯಾದನು.

ಜುಲೈ ಐದಕ್ಕೆ ಆರೋಪಿಯನ್ನು ತಮಗೆ ಹಸ್ತಾಂತರಿಸಲಾಗಿತ್ತು. ಮರು ದಿವಸ ಈತನ ಪರೀಕ್ಷಾ ಫಲಿತಾಂಶ ಬಂದಾಗ ಕೊರೋನ ಇದೆ ಎಂದು ದೃಢಪಟ್ಟಿತು ಎಂದು ಪೊಲೀಸ್ ಸೂಪರಿಡೆಂಟ್ ಮನೋಜ್ ಸಾಹು ಹೇಳಿದರು. ಕೂಡಲೇ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಗೆ ಬರಲು ತಯಾರಾಗಲಿಲ್ಲ. ನಂತರ ತಹಸೀಲ್ದಾರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದೆವು.

ಆರೋಪಿಯನ್ನು ಮಹಾರಾಜಪು ಕೊರೋನ ಕೇಂದ್ರಕ್ಕೆ ಕೊಂಡು ಹೋದೆವು. ಈತನ ಜೊತೆ ಇಬ್ಬರು ಪೊಲೀಸರನ್ನೂ ಕಳುಹಿಸಿದ್ದೆವು. ಈ ನಡುವೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.