100 ದಿನದಲ್ಲಿ 10ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್- ಜೊ ಬೈಡನ್

0
391

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.9: ಅಧಿಕಾರ ವಹಿಸಿಕೊಂಡ 100 ದಿನದೊಳಗೆ 10 ಕೋಟಿ ಜನರಿಗೆ ಕೊರೋನ ವ್ಯಾಕ್ಸಿನ್ ವಿತರಿಸಲಾಗುವುದು ಎಂದು ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. ಜನವರಿ 20ಕ್ಕೆ ಅಮೆರಿಕ ಅಧ್ಯಕ್ಷರಾಗಿ ಬೈಡನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಒಂದು ನೂರು ದಿವಸಗಳ ಕಾಲ ಅಮೆರಿಕ ಮಾಸ್ಕ್‌ನಲ್ಲಿರಬೇಕಾಗುತ್ತದೆ ಎಂಬ ಸೂಚನೆಯನ್ನು ಹೊಸ ಆರೋಗ್ಯ ತಂಡವನ್ನು ನೇಮಿಸಿದ ಬಳಿಕ ಬೈಡನ್ ಹೇಳಿದ್ದರು.

ಆದರೆ ಫೈಸರ್‌ನ ವ್ಯಾಕ್ಸಿನ್‍ಗೆ ಅಮೆರಿಕದಲ್ಲಿ ಶೀಘ್ರ ಅಂಗೀಕಾರ ನೀಡಲಿದೆ ಎಂದು ವರದಿಯಾಗಿದೆ. ಈ ನಡುವೆ ಬೈಡನ್ 100 ದಿವಸಗಳಲ್ಲಿ 10 ಕೋಟಿ ಜನರಿಗೆ ವ್ಯಾಕ್ಸಿನ್ ಇಂಜೆಕ್ಷನ್ ಕೊಡುವ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ ಈವರೆಗೆ ಒಂದೂವರೆ ಕೋಟಿ ಜನರಿಗೆ ಕೊರೋನ ದೃಢಪಟ್ಟಿತ್ತು. 2,85,000 ಮಂದಿ ರೋಗದಿಂದ ಮೃತಪಟ್ಟಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಪುನಃ ಕೊರೋನ ವ್ಯಾಪಿಸಿತ್ತು.