ದ.ಕನ್ನಡ ಸಹಿತ ರಾಜ್ಯದ ಐದು ಜಿಲ್ಲೆಗಳಲ್ಲಿ ಕೇರಳದ ವಿದ್ಯಾರ್ಥಿಗಳಿಗೆ ಕೊರೋನ ಸರ್ಟಿಫಿಕೆಟ್ ಕಡ್ಡಾಯ

0
136

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದ ಐದು ಜಿಲ್ಲೆಗಳಲ್ಲಿ ಕೇರಳದದಿಂದ ಮರಳುವ ವಿದ್ಯಾರ್ಥಿಗಳಿಗೆ ಕೊರೋನ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರು ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಕಲಿಯುವ ಕೇರಳದ ವಿದ್ಯಾರ್ಥಿಗಳಿಗೆ ಕೇರಳಕ್ಕೆ ಹೋಗಿ ಮತ್ತೆ ಮರಳಿ ಬರುವಾಗ ಕೊರೋನ ನೆಗೆಟಿವ್ ಸರ್ಟಿಫಿಕೆಟ್ ತರುವುದು ಕಡ್ಡಾಯಗೊಳಿಸಲಾಗಿದೆ.

72 ಗಂಟೆಗಳಲ್ಲಿ ತಪಾಸಣೆ ಮಾಡಿಸಿದ ಸರ್ಟಿಫಿಕೆಟ್ ಬೇಕು. ಹಾಸ್ಟೆಲ್ ಕಾಲೇಜಿಗೆ ಬರುವಾಗ ಇದನ್ನು ಹಾಜರುಪಡಿಸಬೇಕು ಎಂದು ಆರೋಗ್ಯ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಕೇರಳದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸುಗಳನ್ನು ವ್ಯಾಪಕವಾಗಿ ಕೊಡಬೇಕೆಂದು ವಿದ್ಯಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.