ದೇಶದಲ್ಲಿ ಕೊರೋನ ಹರಡುವಿಕೆಯಲ್ಲಿ ಇಳಿಮುಖ: 24 ಗಂಟೆಗಳಲ್ಲಿ 55,722 ಹೊಸ ಸೋಂಕಿತರು

0
93

ಸನ್ಮಾರ್ಗ ವಾರ್ತೆ

ದಿಲ್ಲಿ,ಅ.19: ದೇಶದಲ್ಲಿ ಪ್ರತಿದಿನ ಕೊರೋನ ಪ್ರಕರಣಗಳು ಕಡಿಮೆಯಾಗುತ್ತಿವೆ. ಕಳೆದ 24 ಗಂಟೆಗಳೊಳಗೆ 55,722 ಮಂದಿಗೆ ಹೊಸದಾಗಿ ಕೊರೋನ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಕೊರೋನ ಪೀಡಿತರ ಸಂಖ್ಯೆ 75,50,273ಕ್ಕೆ ಏರಿಕೆಯಾಗಿದೆ.

ಕಳೆದ ದಿವಸ 579 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ. ಭಾರತದ ಕೊರೋನ ಸಾವಿನ ದರ ಶೇ.1.52ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದುವರೆಗೆ 1,14,610 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ.

ಭಾರತದಲ್ಲಿ 7,72,055 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 66,63,608 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ನಿನ್ನೆ 66,399 ಮಂದಿ ರೋಗದಿಂದ ಗುಣಮುಖರಾದ್ದ ದೇಶದಲ್ಲಿ ರೋಗಮುಕ್ತಿ ದರ ಶೇ.88.6ರಷ್ಟು ಹೆಚ್ಚಿದೆ ಎಂದು ಸಚಿವಾಲಯ ತಿಳಿಸಿದೆ.