ಕೊರೋನಾ ರೋಗಿಗಳಿಗೆ ಹೋಮಿಯೊ ಮದ್ದು ನೀಡಬಹುದು: ಸುಪ್ರೀಂ ಕೋರ್ಟ್

0
189

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ಕೊರೋನಾ ದೃಢಪಟ್ಟವರಿಗೂ ಈಗಿನ ಚಿಕಿತ್ಸೆಯ ಜೊತೆಗೆ ರೋಗ ಶಮನಕ್ಕಾಗಿ ಹೋಮಿಯೊಪತಿ ಮದ್ದು ನೀಡಬಹುದು ಎಂದು ಸುಪ್ರೀಂ ಕೋರ್ಟು ಹೇಳಿದೆ.

ಕೊರೋನಾವನ್ನು ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಅಲೋಪತಿಯೂ ಹೇಳುವುದಿಲ್ಲ ಎಂದು ನೆನಪಿಸಿದ ಸುಪ್ರೀಂ ಕೋರ್ಟ್, ಕೊರೋನಕ್ಕೆ ಹೊಮಿಯೊಪತಿ ಚಿಕಿತ್ಸೆ ಎಂಬ ರೀತಿಯಲ್ಲಿ ಉಪಯೋಗಿಸಬಹುದು ಎಂಬಂಥ ಜಾಹೀರಾತಿಗೆ ಮಾತ್ರ ನಿಷೇಧ ಇದೆ ಎಂದು ಸುಪ್ರೀಂ ಕೋರ್ಟು ಹೇಳಿದೆ.

ಹೋಮಿಯೊ ವೈದ್ಯರು ಕೊರೋನಾ ಪೀಡಿತರಿಗೆ ಮದ್ದು ನೀಡುವುದರ ವಿರುದ್ಧ ಕೇರಳ ಹೈಕೋರ್ಟ್ ನೀಡಿದ ಆದೇಶವನ್ನು ಜಸ್ಟಿಸ್ ಅಶೋಕ್ ಭೂಷಣ್, ಆರ್. ಸುಭಾಶ್ ರೆಡ್ಡಿ, ಎಂ. ಆರ್.. ಶಾರ ಪೀಠ ತಿದ್ದುಪಡಿ ಮಾಡಿ, ಈ ತೀರ್ಪು ನೀಡಿದೆ.

ಕೊರೋನಾದಂತಹ ರೋಗ ಲಕ್ಷಣಗಳಿಗೆ ಇತರ ಚಿಕಿತ್ಸೆಯ ಜೊತೆ ಹೋಮಿಯೊ ಉಪಯೋಗಿಸಬಹುದೆಂದು ಆಯುಷ್ ಸಚಿವಾಲಯ ತಿಳಿಸಿದೆ ಎಂದು ಜಸ್ಟಿಸ್ ಅಶೋಕ್ ಭೂಷಣ್ ಅಧ್ಯಕ್ಷತೆ ಪೀಠ ಬೆಟ್ಟು ಮಾಡಿತು. ಅಂಗೀಕೃತ ಸಂಸ್ಥೆಯಲ್ಲಿ ಕಲಿತ ಅರ್ಹರಾದ ವೈದ್ಯರು ಕೊರೊನ ಪ್ರತಿರೋಧಕ್ಕೆ ಹೋಮಿಯೊಪತಿ ಮದ್ದು ನೀಡಬಹುದು ಎಂದು ಸುಪ್ರೀಂಕೋರ್ಟು ಹೇಳಿತು.