ಸೌದಿ: ಕೊರೋನ ಹರಡುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನ ಬಳಕೆ

0
493

ಸನ್ಮಾರ್ಗ ವಾರ್ತೆ

ಜಿದ್ದ,ಜೂ.19: ಕೊರೋನ ಹರಡುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನ ಜಾಗತಿಕ ಮಟ್ಟದಲ್ಲಿ ಉಪಯೋಗಿಸುತ್ತಿರುವ ಮೂರನೆ ದೇಶವೆಂಬ ಕೀರ್ತಿ ಸೌದಿ ಅರೇಬಿಯಾಕ್ಕೆ ದೊರಕಿದೆ. ಆಪಲ್, ಗೂಗಲ್ ಕಂಪೆನಿಗಳು ಅಭಿವೃದ್ಧಿಪಡಿಸಿದ ಎಕ್ಸ್‌ಪೋಷನ್ ನೊಟಿಫಿಕೇಶನ್ ತಂತ್ರಜ್ಞಾನ ಉಪಯೋಗಿಸಿ ತಬಾಉದ್ (ದೂರ ನಿಲ್ಲಿರಿ) ಎಂಬ ಆಪ್ಲಿಕೇಶನ್ ಸೌದಿ ಅರೇಬಿಯ ಅಭಿವೃದ್ಧಿ ಪಡಿಸಿದೆ. ಇದು ದೊಡ್ಡ ಸಾಧನೆಯೆಂದು ಅದು ಹೇಳಿಕೊಂಡಿದೆ. ಇದರೊಂದಿಗೆ ಸೌದಿ ಅರೇಬಿಯಕ್ಕೆ ಮೂರನೆ ಸ್ಥಾನ ಲಭಿಸಿದೆ.

ಕೊರೋನ ರೋಗಿಗಳೊಂದಿಗೆ ಬೆರೆಯುವವರು ಅಗತ್ಯ ಮುನ್ನೆಚ್ಚರಿಕೆ ಮುನ್ಸೂಚನೆ ನೀಡುವುದಕ್ಕೆ ಆರೋಗ್ಯ ಸಚಿವಾಲದೊಂದಿಗೆ ಸಹಕರಿಸಿ ಸೌದಿ ಅಥಾರಿಟಿ ಡಾಟಾ ಆಂಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಬಾಉದ್‌ನ್ನು ಅಭಿವೃದ್ಧಿ ಪಡಿಸಿದೆ. ಕೊರೋನ ರೋಗಿಗಳೊಂದಿಗೆ ಸಂಪರ್ಕ ಇದ್ದ ವಿವರವನ್ನು ಬಳಕೆದಾರನಿಗೆ ತಿಳಿಸುವ ಇದು ಬ್ಲೂಟೂತ್ ತಂತ್ರಜ್ಞಾನದಲ್ಲಿ ಕಾರ್ಯವೆಸಗುತ್ತದೆ.

ಹದಿನಾಲ್ಕು ದಿವಸದೊಳಗೆ ಯಾವುದಾದರೂ ಕೊರೋನ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರೆ ರೋಗಿ ಫೋನ್ ವಿವರ ಸಹಿತ ವಿವರಗಳು ಆಪ್ ಮೂಲಕ ಬಳಕೆದಾರನಿಗೆ ಸಿಗಲಿದೆ. ಇದರೊಂದಿಗೆ ಬಳಕೆದಾರನಿಗೆ ಕ್ವಾರಂಟೈನ್ ಸಹಿತ ಆರೋಗ್ಯ ಸುರಕ್ಷೆಯ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗಲಿದೆ. ಖಾಸಗಿ ವಿವರಗಳನ್ನು ಸಂಪೂರ್ಣ ಸಂರಕ್ಷಿಸುವ ರೀತಿಯಲ್ಲಿ ಆಪ್ ಇದೆ. ಕೊರೋನ ಹರಡುವುದನ್ನು ತಡೆಯಲು ವಿವಿಧ ಇಲಾಖೆಗಳೂ ಸೇರಿ ಮಾಡುತ್ತಿರುವ ಪ್ರಯತ್ನಗಳ ಭಾಗವಾಗಿ ಸೌದಿ ಡಾಟ ಅಥಾರಿಟಿ ಹೊಸ ಆಪ್ ಅನ್ನು ಸಿದ್ಧಪಡಿಸಿದೆ. ಈ ಹಿಂದೆ ಕಫ್ರ್ಯೂ ವೇಳೆ ಪ್ರಯಾಣಕ್ಕೆ ಮತ್ತು ಇತರ ಸೇವೆಗಳಿಗಾಗಿ ತವಕ್ಕಲ್ನಾ ಎಂಬ ಆಪ್ ಹೊರಬಂದಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here