ಪ್ರಧಾನಿ ಮೋದಿಯವರು ಸಾರ್ವಜನಿಕವಾಗಿ ಕೊರೋನ ವ್ಯಾಕ್ಸಿನ್ ಪಡೆಯಲಿ: ದಯಾನಿಧಿ ಮಾರನ್

0
377

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ಕೋವಿಡ್ ಲಸಿಕೆ ಪಡೆಯಲಿ ಎಂದು ಡಿಎಂಕೆ ಪಕ್ಷದ ಲೋಕಸಭಾ ಸದಸ್ಯ ದಯಾನಿಧಿ ಮಾರನ್ ಆಗ್ರಹಿಸಿದ್ದಾರೆ.

ಹಲವರಲ್ಲಿ ಕೊರೋನ ವ್ಯಾಕ್ಸಿನ್ ಕುರಿತು ಭೀತಿಯಿದ್ದು, ಅವರಲ್ಲಿ ವಿಶ್ವಾಸ ಮೂಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಲಸಿಕೆ ಪಡೆಯಲಿ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಲ್ಲದೇ, ರಾಷ್ಟ್ರಪತಿ, ಗೃಹ ಸಚಿವರು, ರಕ್ಷಣಾ ಸಚಿವರು ಕೂಡಾ ಸಾರ್ವಜನಿಕವಾಗಿ ಕೊರೋನಾ ಲಸಿಕೆ ಪಡೆಯಬೇಕು ಎಂದರು.

ಕೊರೋನಾ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಸಮಾಧಾನವಿಲ್ಲ, ಲಸಿಕೆಯ ದಕ್ಷತೆಯ ಕುರಿತು ಜನರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ ಮಾರನ್, ಅಮೆರಿಕ ಅಧ್ಯಕ್ಷ ಜೋ-ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಾರ್ವಜನಿಕವಾಗಿ ಲಸಿಕೆ ಪಡೆದಿರುವುದನ್ನು ಉಲ್ಲೇಖಿಸಿದರು.