ಏಕರೂಪ ನೀತಿ ಸಂಹಿತೆ: ಕೇಂದ್ರ ಸರಕಾರಕ್ಕೆ ದೆಹಲಿ ಹೈ ಕೋರ್ಟ್ ನೋಟಿಸು!

0
481

ಹೊಸದಿಲ್ಲಿ,ಜೂ.1: ಸಂವಿಧಾನದ 14,15,44 ವಿಧಿಯನ್ನೊಳಗೊಂಡು ಏಕ ರೂಪ ನೀತಿ ಸಂಹಿತೆಯ ಕರಡು ತಯಾರಿಸಬೇಕೆಂದು ದಿಲ್ಲಿ ಹೈಕೋರ್ಟು ಕೇಂದ್ರ ಸರಕಾರಕ್ಕೆ ನೋಟಿಸು ನೀಡಿದೆ. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಚೀಫ್ ಜಸ್ಟಿಸ್ ರಾಜೇಂದ್ರ ಮೆನೊನ್ ಅಧ್ಯಕ್ಷತೆ ಪೀಠ ಅರ್ಜಿಯನ್ನು ಪೈಲಿಗೆ ಸ್ವೀಕರಿಸಿ ಕಾನೂನು ಆಯೋಗಕ್ಕೆ ನೋಟಿಸು ಜಾರಿಗೊಳಿಸಿತು. ಏಕರೂಪ ನೀತಿ ಸಂಹಿತೆಯ ಕರಡು ಮೂರು ಆರ್ಥಿಕ ವರ್ಷಗಳೊಳಗೆ ತಯಾರಿಸಬೇಕೆಂದು ಕಾನೂನು ಆಯೋಗ ಅಥವಾ ಉನ್ನತಾಧಿಕಾರಿ ಸಮಿತಿಯನ್ನು ನೇಮಕಗೊಳಿಸಲು ಆಗ್ರಹಿಸಿ ಕೋರ್ಟಿಗೆ ಅರ್ಜಿ ಹಾಕಲಾಗಿತ್ತು. ವಿವಿಧ ಧರ್ಮ, ವಿಭಾಗಗಳು ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇರುವ ಕಾನೂನನ್ನು ಪರಿಗಣಿಸಿ ತಯಾರಿಸುವ ಕರಡು ರೂಪ ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಅರುವತ್ತು ದಿವಸಗಳಲ್ಲಿ ಜನರಿಂದ ಅಭಿಪ್ರಾಯವನ್ನು ಆಹ್ವಾನಿಸಬೇಕೆಂದು ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಸೂಚಿಸಿದ್ದರು.