ಹೆಚ್ಚಿದ ವಾಯು ಮಾಲಿನ್ಯ: ಅಪಾಯದಲ್ಲಿ ದಿಲ್ಲಿ ವಾತಾವರಣ

0
117

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.15: ದೀಪಾವಳಿ ಹಬ್ಬ ಸಂಭ್ರಮ ಮುಂವದುರಿಯುತ್ತಿದ್ದು ದಿಲ್ಲಿಯಲ್ಲಿ ವಾತಾವರಣ ಮಲಿನೀಕರಣ ಅಪಾಯಕಾರಿಯಾದ ನೆಲೆಗೆ ತಲುಪಿದೆ. ನಾಲ್ಕು ವರ್ಷದಲ್ಲಿ ಅತ್ಯಂತ ಹೆಚ್ಚು ಈ ಬಾರಿ ಆಂತರಿಕ ಮಲಿನೀಕರಣ ಆಗಿದ್ದು ಗಂಟೆಗೆ 25 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಜೊತೆಗೆ ಸ್ವಲ್ಪ ಮಳೆಯೂ ಸುರಿದಿರುವುದು ದಿಲ್ಲಿಗರಿಗೆ ಸಾಂತ್ವನದಂತಾಯಿತು. ಒಂದು ವಾರದಲ್ಲಿ ಅತ್ಯಂತ ಹೆಚ್ಚು ಮಲಿನೀಕರಣ ದಿಲ್ಲಿಯಲ್ಲಿ ಆಗಿದೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಸುಟ್ಟಿರುವುದು ಮತ್ತು ಇತರ ಕಾರಣದಿಂದ ಮಲಿನೀಕರಣದಲ್ಲಿ ಹೆಚ್ಚಳವಾಗಿದೆ.

ಹೃದಯ-ಉಸಿರಾಟ ಸಂಬಂಧಿಸಿದ ಸಮಸ್ಯೆಗಳಿಗೆ ಮಲಿನೀಕರಣ ಕಾರಣವಾಗಬಹುದು. ವಾತಾವರಣ ಮಲಿನ ಕಳೆದ ವಾರವೇ ಸುರಕ್ಷಿತ ವ್ಯಾಪ್ತಿಯನ್ನು ದಾಟಿತ್ತು. ದಿಲ್ಲಿಯಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿತ್ತು. ದೀಪಾವಳಿಯಲ್ಲಿ ಹಸಿರು ನ್ಯಾಯ ಮಂಡಳಿ ಪಟಾಕಿ ಮಾರುವುದನ್ನು ಉಪಯೋಗಿಸುವುದನ್ನು ನಿಷೇಧಿಸಿತ್ತು. ಆದರೂ ನಿಷೇಧ ಉಲ್ಲಂಘಿಸಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸುಡಲಾಗಿತ್ತು.

ನವೆಂಬರ್ 30ರವರೆಗೆ ಪಟಾಕಿಗಳ ಮಾರಾಟ ಇತ್ಯಾದಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಸೋಮವಾರ ಪುನಃ ಹಸಿರು ನ್ಯಾಯಮಂಡಲಿ ಆದೇಶ ಹೊರಡಿಸಿದೆ.