ಉಮರ್ ಖಾಲಿದ್, ಶರ್ಜಿಲ್ ಇಮಾಮ್ ವಿರುದ್ಧ ಮರಣದಂಡನೆ ಲಭಿಸಬಹುದಾದ ಚಾರ್ಜ್ ಶೀಟ್!

0
890

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.24: ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್, ಶರ್ಜಿಲ್ ಇಮಾಮ್ ವಿರುದ್ಧ ದಿಲ್ಲಿ ಕೋಮು ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಗಲ್ಲುಶಿಕ್ಷೆ ಸಿಗಬಹುದಾದಂತ ಯುಎಪಿಎ ವಿವಿಧ ಕಲಂಗಳನ್ನು ಹೊರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ದಿಲ್ಲಿ ಸರಕಾರ ಉಮರ್ ಮತ್ತು ಶರ್ಜಿಲ್ ವಿರುದ್ಧ ವಿಚಾರಣೆಗೆ ಅಕ್ಟೋಬರಿನಲ್ಲಿ ಅನಮತಿ ನೀಡಿದ ನಂತರ ದಿಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಸನುಲ್ ಬನ್ನಾ ಕ್ರಿಮಿನಲ್ ಸಂಚು, ಗಲಭೆ ಮಾಡಿದ್ದು, ವಂಚನೆ, ಕೊಲೆ, ಕೊಲೆ ಯತ್ನ, ಆಯುಧ ಕಾನೂನು, ವಸ್ತುಗಳ ನಾಶ, ವಿವಿದ ಧರ್ಮ ವಿಭಾಗಳ ನಡುವೆ ದ್ವೇಷ ಉಂಟುಮಾಡಿದ್ದು ಇತ್ಯಾದಿ ಆರೋಪವನ್ನು ವಿದ್ಯಾರ್ಥಿ ನಾಯಕರ ವಿರುದ್ಧ ಹೊರಿಸಲಾಗಿದೆ. ಫೆಝಲ್ ಖಾನ್ ವಿರುದ್ಧ ಕೂಡ ಇದೇ ಆರೋಪ ಹೊರಿಸಿ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲಾಗಿದೆ.

ಪಿಂಚ್‍ರತೊಡ್ ನಾಯಕರಾದ ವೇವಾಂಗನ ಕಲಿತ, ನಟೇಶ್ ನರ್ವಲ್, ಗುಲ್ಫಿಶ್ ಫಾತಿಮ, ಎಸ್‍ಐಒ ನಾಯಕ ಆಸಿಫ್ ಇಕ್ಬಾಲ್ ತನ್ಹಾ ವಿರುದ್ಧ ಸಲ್ಲಿಸಿದ ಮುಖ್ಯ ಆರೋಪ ಪಟ್ಟಿಯ ಅನುಬಂಧ ಆರೋಪ ಪಟ್ಟಿ ಇದು. ಉಮರ್ ಖಾಲಿದ್, ಶಾರ್ಜಿಲ್ ಇಮಾಮ್ ನ್ಯಾಯಾಂಗ ಬಂಧನದಲ್ಲಿದ್ದಾರೆ, ಫೈಝಲ್ ಖಾನ್ ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದಾರೆ.