ಸಾಲ ಬಾಧೆ: 15 ವರ್ಷದ ಬಾಲಕಿಯನ್ನು ಒಂದು ಲಕ್ಷಕ್ಕೆ ಮಾರಿದ ತಾಯಿ!

0
585

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಒಂದು ಲಕ್ಷ ರೂಪಾಯಿಗೆ ಹದಿನೈದು ವರ್ಷದ ಬಾಲಕಿಯನ್ನು ಮಾನವ ಸಾಗಾಟದಾರರಿಗೆ ತಾಯಿಯೊಬ್ಬರು ಮಾರಿದ ಘಟನೆ ದಿಲ್ಲಿಯ ಭವಾನದಲ್ಲಿ ನಡೆದಿದೆ. ತನ್ನ ಒಂದು ವರ್ಷದ ಸಹೋದರನನ್ನೂ ತಾಯಿ ಇದೇ ರೀತಿ ಮಾರಾಟ ಮಾಡಿದ್ದಾರೆಂದು ಬಾಲಕಿ ತನ್ನನ್ನು ರಕ್ಷಿಸಿದ ಮಹಿಳಾ ಆಯೋಗಕ್ಕೆ ತಿಳಿಸಿದ್ದಾಳೆ.

ತನ್ನ ಜೊತೆ ಬದರ್‍ಪುರದ ಸಹೋದರಿಯ ಮನೆಗೆ ಬರಲು ತಾಯಿ ಹೇಳಿದರು. ಆದರೆ ನಿಝಾಮುದ್ದೀನ್‌ನಲ್ಲಿರುವ ಒಂದು ಹೊಟೇಲಿಗೆ ತನ್ನನ್ನು ಕರೆದು ಕೊಂಡು ಹೋದರು. ಇನ್ನೊಬ್ಬರು ಬಂದು ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ ಬಳಿಕ ತಾಯಿ ಅಲ್ಲಿಂದ ಕಣ್ಮರೆಯಾದರೆಂದು ಎಂದು ಬಾಲಕಿ ತಿಳಿಸಿದ್ದಾಳೆ.

ಬಾಲಕಿ ಕಣ್ತಪ್ಪಿಸಿ ಪಾರಾಗಿ ಭವಾನಕ್ಕೆ ಬಂದು ನೆರೆಮನೆಯವರಲ್ಲಿ ಸಹಾಯ ಯಾಚಿಸಿದ್ದಾಳೆ. ನಂತರ ಅವರು ಮಹಿಳಾ ಆಯೋಗ ಮತ್ತು ಪೊಲೀಸರಿಗೆ ಬಾಲಕಿಯೊಂದಿಗೆ ನಡೆದಿದ್ದ ಘಟನೆಯನ್ನು ತಿಳಿಸಿದ್ದರು.

ತಾಯಿ, ಮಲತಂದೆ ಮತ್ತು ನಾಲ್ವರು ಸಹೋದರರ ಜೊತೆ ಬಾಲಕಿ ವಾಸವಿದ್ದಳು. ಮೈತುಂಬ ಸಾಲ ಇದ್ದುದರಿಂದ ತನ್ನನ್ನು ತಾಯಿ ಮಾರಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.