ದೇಶಕ್ಕಾಗಿ ಹುತಾತ್ಮರಾದ ಮುಸ್ಲಿಮರು

0
1460
ಬ್ರಿಗೇಡಿಯರ್ ಉಸ್ಮಾನ್

ಸ್ವಾತಂತ್ರ್ಯ ವಿಶೇಷ


ಭಾರತಿಯರಾದ ನಾವು ಬ್ರಿಗೇಡಿಯರ್ ಉಸ್ಮಾನ್, ಕ್ರಾಂತಿಕಾರಿ ಅಶ್ಫಾಕುಲ್ಲಾ ಖಾನ್, ಮತ್ತು ಹವಾಲ್ದಾರ ಅಬ್ದುಲ್ ಹಮೀದ್ ಇವರು ಹುತಾತ್ಮರಾದುದನ್ನು ದಿನವನ್ನು ಪ್ರತಿ ವರ್ಷವೂ ನೆನೆಪಿಸಿಕೊಳ್ಳುತ್ತಿದ್ದೇವೆ.
1) ಬ್ರಿಗೇಡಿಯರ್ ಉಸ್ಮಾನ್ 66 ವರುಷ ಗಳ ಹಿಂದೆ ಜಮ್ಮು ಕಾಶ್ಮೀರದ ಜಂಗಾರ್‍ನಲ್ಲಿ ಗಡಿಯ ರಕ್ಷಣೆಯ ವೇಳೆ ಸೈನಿಕರ ಗುಂಡಿಗೆ ಬಲಿಯಾದರು ಅವರು, ಜಂಗಾರ್ ಕದನದಲ್ಲಿ ಬ್ರಿಗೇಡಿಯರ್ ಮುಹಮ್ಮದ್ ಉಸ್ಮಾನ್ ಹುತಾತ್ಮ ರಾದಾಗ ಇಡೀ ದೇಶವೇ ಈ ಮಾಹಾನ ಯೋಧನಿಗೆ ವೀರ ನಮನ ಸಲ್ಲಿಸಿತ್ತು. ಆಗಿನ ಪ್ರಧಾನಿ ಜವಾಹರಲಾಲ ನೆಹರು ಹಾಗೂ ಅವರ ಸಂಪುಟ ಸಹದ್ಯೋಗಿಗಳು ಉಸ್ಮಾನ್ ಅವರ ಅಂತ್ಯಕ್ರಿಯಯಲ್ಲಿ ಪಾಲ್ಗೊಂಡಿದ್ದರು. ಬ್ರಿಗೇಡಿಯರ್ ಮುಹಮ್ಮದ್ ಉಸ್ಮಾನ್ ಈ ವರೆಗೆ ಯುದ್ಧ ಭೂಮಿಯಲ್ಲಿ ಪ್ರಾಣಾರ್ಪಣೆ ಮಾಡಿದ ಸೇನಾಧಿಕಾರಿಗಳಲ್ಲಿಯೇ ಅತ್ಯುನ್ನತ ಹುದ್ದೆಯವರಾಗಿದ್ದರು. ಹೊಸ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಆವರಣದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಪೂರ್ಣ ಗೊಳಿಸಲಾಗಿತ್ತು.
ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟಂಬದಲ್ಲಿ ಜನಿಸಿದ ಉಸ್ಮಾನ್‍ರು ಬಾಲ್ಯ ದಿಂದಲೇ ಮಹಾ ಧೈರ್ಯಶಾಲಿಯಾಗಿದ್ದರು. ಅವರು 12 ವರುಷದವರಿದ್ದಾಗ ನೀರಿನಲ್ಲಿ ಮುಳುಗಿದ ಮಗುವನ್ನು ರಕ್ಷಿಸಲು ಬಾವಿಗೆ ಹಾರಿದ್ದರು. 1932ರಲ್ಲಿ ಬ್ರಿಟನಿನ್ ಸ್ಯಾಂಡ್ ಹಸರ್‍ನಲ್ಲಿರುವ ಪ್ರತಿಷ್ಠಿತ ರಾಯಲ್ ಮಿಲಿಟರಿ ಅಕಾಡಮಿಯಲ್ಲಿ ಪ್ರವೇಶ ಪಡೆದ ಹತ್ತು ಭಾರತೀಯರಲ್ಲಿ ಉಸ್ಮಾನ್ ಕೂಡ ಒಬ್ಬರಾಗಿದ್ದರು. ತನ್ನ 23ನೇ ವಯಸ್ಸಿನಲ್ಲಿ ಅವರು ಬ್ರಿಟನ್ ಸೇನೆಯ ಬಲೂಚ್ ರೆಜಿಮೆಂಟನ ಸೇನಾಧಿಕಾರಿ ಯಾಗಿ ನಿಯೋಜಿತರಾದರು. ಎರಡನೇ ಮಹಾ ಯುದ್ಧದ ವೇಳೆ ಬರ್ಮಾ (ಈಗಿನ ಮ್ಯಾನ್ಮಾರ್) ಮತ್ತು ಅಫಘಾನಿಸ್ತಾನದಲ್ಲಿ ನಡೆದ ಸಮಾರಂಭ ಗಳಲ್ಲಿಯೂ ಅವರು ಪಾಲ್ಗೊಂಡಿದ್ದರು. ತನ್ನ ಕರ್ತವ್ಯ ನಿಷ್ಠೆಯಿಂದ ತ್ವರಿತವಾಗಿ ಅವರು ಬ್ರಿಗೇಡಿಯರ್ ಹುದ್ದೆಗೆ ಭಡ್ತಿ ಪಡೆದರು. ಈಗಿನ ಪಾಕಿಸ್ತಾನದಲ್ಲಿರುವ ಮುಲ್ತಾನ್‍ನಲ್ಲಿ ಭುಗಿಲೆದ್ದ ಕೋಮು ಉದ್ವಿಗ್ನತೆಯ ಸ್ಥಿತಿಯನ್ನು ಸರಿಯಾಗಿ ನಿಯಂತ್ರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಪಾಕ್ ಸೇನೆಯನ್ನು ಸೇರಿದಲ್ಲಿ ವಿಶೇಷ ಬಡ್ತಿಗಳನ್ನು ನೀಡುವುದಾಗಿ ಪಾಕ್ ನಾಯಕರು (ಭಾರತ ವಿಭಜನೆಯಾದಾಗ) ಉಸ್ಮಾನ್ ಅವರಿಗೆ ಭರವಸೆ ಕೊಟ್ಟಿದ್ದರು. ಇಷ್ಟೇ ಅಲ್ಲ, ಮುಂದೆ ಪಾಕ್ ಸೇನಾ ಮುಖ್ಯಸ್ಥರನ್ನಾಗಿ ಮಾಡುವ ಭರವಸೆ ಕೂಡ ಕೊಟ್ಟಿದ್ದರು. ಆದರೆ ಉಸ್ಮಾನ್ ಭಾರತ ದಲ್ಲಿಯೇ ಉಳಿಯಲು ನಿರ್ಧರಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದರು. ಅವರ ಮನವೊಲಿಸಲು ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಹಾಗೂ ಆಗಿನ ಪಾಕ್ ಸೇನಾ ವರಿಷ್ಠ ಲಿ ಯಾಕತ್ ಅಲಿ ಖಾನ್ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ. ಭೂಸೇನಾ ಮಾಜಿ ಉಪ ಮುಖ್ಯಸ್ಥ ಲೆ.ಜ.ಎಸ್.ಕೆ. ಸಿನ್ಹಾ ಅವರು ಉಸ್ಮಾನ್‍ರ ಶೌರ್ಯ, ಸಾಹಸಗಳನ್ನು ತುಂಬಾ ಸ್ಮರಿಸಿ ಕೊಂಡಿದ್ದರು.
ಬ್ರಿಗೇಡಿಯರ್ ಉಸ್ಮಾನ್‍ರು ಪಾಕ್ ವಶದಲ್ಲಿ ರುವ ಕೋಟನೆಲೆಯ ಮೇಲೆ ಯಶಸ್ವಿ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡರು. ಇದಾದ ಒಂದು ವಾರದ ಬಳಿಕ 10 ಸಾವಿರಕ್ಕೂ ಅಧಿಕ ನುಸುಳು ಕೋರರು ನೌಶೇರಾದ ಮೇಲೆ ದಾಳಿ ನಡೆಸಿದರು. ಆದರೆ ಉಸ್ಮಾನ್ ನೇತೃತ್ವದಲ್ಲಿ ಭಾರತೀಯ ಯೋಧರು ವೀರಾವೇಶದಿಂದ ಹೋರಾಡಿ ಶತ್ರು ಸೈನಿಕರನ್ನು ಹಿಮ್ಮೆಟಿಸಿದರು. ನೌಶೇರಾ ಕದನದೊಂದಿಗೆ ಉಸ್ಮಾನ್ ಹೆಸರು ಇಡೀ ಭಾರತೀಯರ ನಾಲಿಗೆಯಲ್ಲಿ ನಲಿದಾಡ ತೊಡಗಿತು. ಅವರು ನೌಶೇರ್‍ಕಾ ಶೇಖ ಎಂದೇ ಖ್ಯಾತರಾದರು. ನೌಶೇರಾ ಕದನದ ಬಳಿಕ ಉಸ್ಮಾನ್ ತಲೆಗೆ ಪಾಕಿಸ್ತಾನ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು. ಆಗಿನ ಕಾಲದ 50 ಸಾವಿರ ರೂಪಾಯಿ ಬಹು ದೊಡ್ಡ ಮೊತ್ತವಾಗಿತ್ತು. ಉಸ್ಮಾನ್‍ರ ಶೌರ್ಯ, ಸಾಹಸ ವನ್ನು ಮೆಚ್ಚಿ ಸೇನಾಧಿಕಾರಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದರೂ ಉಸ್ಮಾನ್ ರಿಗೆ ಅದ್ಯಾವುದರ ಬಗ್ಗೆಯೂ ಯಾವ ಗಮನ ವಿರಲಿಲ್ಲ ಅವರಾಗ ಬರೀ ನೆಲದಲ್ಲಿಯೇ ಮಲಗಿ ರಾತ್ರಿ ಕಳೆಯುತ್ತಿದ್ದರು. ಪಾಕ್ ಸೈನಿಕರು ಆಕ್ರಮಿಸಿ ಕೊಂಡಿರುವ ಜಂಗೀರವನ್ನು ಮರುವಶ ಪಡಿಸಿ ಕೊಳ್ಳುವ ತನಕ ತಾನು ಮಂಚದಲ್ಲಿ ಮಲಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
3 ಜುಲಾೈ 1948 ಸಂಜೆ 5:45 ಸಮಯ. ಜಮ್ಮುವಿನ ನೌಶೇರಾ ಸಮೀಪದ ಜಂಗಾರ್ ಪ್ರದೇಶವಿದು. ಸೂರ್ಯ ಆಗಷ್ಟೇ ಮುಳುಗುತ್ತಿದ್ದ, ಸಂಜೆಯ ನಮಾಝ್ (ಪ್ರಾರ್ಥನೆ) ಸಲ್ಲಿಸಿ ಅಲ್ಲಾಹನನ್ನು ನೆನೆಪಿಸಿಕೊಳ್ಳುತ್ತ ಭಾರತಿಯ ಸೇನಾ ಪಡೆಯ ಬ್ರಿಗೇಡಿಯರ್ ಉಸ್ಮಾನ್ ಎಂದಿನಂತೆ ತನ್ನ ಕಮಾಂಡ್ ಠಾಣೆಯಲ್ಲಿರುವ ತನ್ನ ಸೇನಾ ಸಿಬ್ಬಂದಿಯ ಜೊತೆ ಸಭೆ ಸಡೆಸಿದರು. ಸಭೆ ನಡೆಯುತ್ತಿದ್ದ ಹಾಗೆಯೇ ಕಿವಿಗಡಚಿಕ್ಕುವ ಸದ್ದಿ ನೊಂದಿಗೆ ಶೆಲ್‍ಗಳು ಠಾಣೆಯತ್ತ ಹಾರಿ ಬರ ತೊಡಗಿದವು. ಕೂಡಲೇ ಜಾಗೃತಗೊಂಡ ಭಾರತೀಯ ಸೈನಿಕರು ಸಮೀಪದಲ್ಲಿಯೇ ಇರುವ ಬಂಡೆಗಳ ರಾಶಿಯ ಹಿಂದೆ ಆಶ್ರಯ ಪಡೆದು ಕೊಂಡರು, ಕೂಡಲೇ ಪ್ರತಿ ಆಕ್ರಮಣಕ್ಕೆ ಸನ್ನದ್ಧ ರಾದ ಉಸ್ಮಾನ್‍ರು ಶತ್ರು ಸೈನಿಕರು ಭಾರೀ ಸನಿ ಹಕ್ಕೆ ನುಗ್ಗಿರುವುದನ್ನು ಅರಿತುಕೊಂಡರು. ಎತ್ತರದ ಜಾಗದಲ್ಲಿ ಪಾಕ್ ಸೈನಿಕರು ಠಾಣೆಯನ್ನು ಸ್ಥಾಪಿಸಿಕೊಂಡಿರುವುದು ಗೊತ್ತಾಯಿತು. ಕೂಡಲೇ ಅವರು ತನ್ನ ಸೈನಿಕರಿಗೆ ಠಾಣೆಯ ಸುತ್ತಲೂ ವ್ಯೂಹವನ್ನು ರಚಿಸುವಂತೆ ಆಜ್ಞಾಪಿಸಿದರು. ತಾವೇ ಸ್ವತಃ ಶತ್ರು ಸೈನಿಕರ ಮೇಲೆ ದಾಳಿಗೂ ಮುಂದಾದರು. ಆದರೆ ಅವರು ಮನ್ನುಗ್ಗುತಿದ್ದಂತೆಯೇ ಎದುರಿನಿಂದ ಬಂದ ಶೆಲ್ಲೊಂದು ಅವರ ಜೀವನವನ್ನೇ ಬಲಿ ತೆಗೆದುಕೊಂಡಿತು. ಎಂತಹ ವೀರಮರಣ. ತನ್ನ 36 ವರುಷ ಮುಗಿಸಲು ಕೇವಲ 12 ದಿನಗಳು ಉಳಿದಿದ್ದವು. ಜಂಗಾರವನ್ನು ವಶಪಡಿಸಿಕೊಳ್ಳಲಾಯಿತು. ಭಾರತ ಧ್ವಜ ಹಾರಿಸಲಾಯಿತು. ಒಂದು ವೇಳೆ ಉಸ್ಮಾನ್ 1948 ಜುಲೈನಲ್ಲಿ ನಡೆದ ದಾಳಿಯಲ್ಲಿ ಬದುಕಿ ಉಳಿದಿ ದ್ದರೆ ಅವರು ಭಾರತದ ಪ್ರಪ್ರಥಮ ಮುಸ್ಲಿಮ್ ಸೇನಾ ಮುಖ್ಯಸ್ಥರಾಗುವ ಎಲ್ಲ ಸಾಧ್ಯತೆಗಳು ಇದ್ದವು.
2) ಕ್ರಾಂತಿಕಾರಿ ಅಶ್ಫಾಕ್ ಉಲ್ಲಾ ಖಾನ್. ಉತ್ತರ ಪ್ರದೇಶದ ಲಖನೌ ನಗರದಿಂದ 18 ಕಿ.ಮಿ. ದೂರದಲ್ಲಿ ಸಣ್ಣ ರೇಲ್ವೆ ನಿಲ್ದಾಣ ಕಾಕೋರಿಯಾ ಇದೆ. ಈ ನಿಲ್ದಾಣದಲ್ಲಿ 8 ರೈಲಿಗೆ ತಡೆಯೊಡ್ಡುವ ಕ್ರಾಂತಿಕಾರಿಗಳು, ಬ್ರಿಟಿಷರ ವಷದಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಈ ಕಾರ್ಯಚರಣೆಯಲ್ಲಿ ತೊಡಗಿದ್ದ 43 ಕ್ರಾಂತಿಕಾರಿಗಳ ಬಂಧನವಾಗುತ್ತದೆ. ಅದರಲ್ಲಿ ಅಶ್ಫಾಕ್ ಉಲ್ಲಾಖಾನ್ ಒಬ್ಬರು. 1927 ಡಿಸೆಂಬರ್ 18 ರಂದು ಅಶ್ಫಾಕ್ ಉಲ್ಲಾ ಖಾನ್, ಠಾಕೂರ್ ರೋಶನ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಗುತ್ತದೆ.
3) ಹವಾಲ್ದಾರ್ ಅಬ್ದುಲ್ ಹಮೀದ್ 1965ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ಪಾಕಿಸ್ತಾನದ ಮೂರು ಟ್ಯಾಂಕ್‍ಗಳನ್ನು ಧ್ವಂಸ ಮಾಡುತ್ತ ಮುನ್ನುಗ್ಗಿ ವೀರ ವೈರಿಗಳ ದಾಳಿಗೆ ತುತ್ತಾಗಿ ಹುತಾತ್ಮರಾಗುತ್ತಾರೆ.
ಇಂತಹ ಅನೇಕ ಮುಸ್ಲಿಮರು ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದಾರೆ. ಇಂತಹ ಘಟನೆಗಳ ಬಗ್ಗೆ ನಮ್ಮ ಪಠ್ಯ ಪುಸ್ತಕ ಗಳಲ್ಲಾಗಲಿ ಜನಮಾನಸಗಳಲ್ಲಾಗಲಿ ಮಾಹಿತಿ ಇಲ್ಲದಿರುವುದು ವಿಷಾದನಿಯ.
1942ರಲ್ಲಿ ಕ್ವಿಟ್ ಇಂಡಿಯಾ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ದೇಶದಲ್ಲಿ ಮೊಟ್ಟ ಮೊದಲ ಬಾರಿ ಕೊಟ್ಟವರು ಯೂಸುಫ್ ಮೆಹರ್ ಅಲಿ. ಇಂದಿನ ಪೀಳಿಗೆ ಇದನ್ನು ತಿಳಿಯುವುದು ಆವಶ್ಯಕ (ಪ್ರಧಾನಿ ನರೇಂದ್ರ ಮೋದಿಯವರ ಮನ್‍ಕಿ ಬಾತ್ ರೇಡಿಯೋ ಕಾರ್ಯಕ್ರಮ 01.08.2017ರಲ್ಲಿ).

@ ನಜೀರ್ ಅಹಮ್ಮದ್ ಖಾಜಿ

(ಲೇಖಕರು, ಉಪನ್ಯಾಸಕರು, ಸಿಕ್ಯಾಬ ವಿಜಯಪೂರ)