ಡಿಜಿಟಲ್ ಮಾಧ್ಯಮಗಳನ್ನು ಮೊದಲು ನಿಯಂತ್ರಿಸಿ: ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಕೇಂದ್ರ ಸರಕಾರ

0
161

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ಡಿಜಿಟಲ್ ಮಾಧ್ಯಮಗಳಲ್ಲಿ ಭಾರೀ ಪ್ರಮಾಣದಲ್ಲಿ ದ್ವೇಷ ಪ್ರಚಾರ ನಡೆಯುತ್ತಿದೆ. ಮೊದಲು ಅದನ್ನು ನಿಯಂತ್ರಿಸಿ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಹೇಳಿದೆ.

ಮುಸ್ಲಿಮರನ್ನು ನಿಂದಿಸಲು ನೋಡಿದೆ ಎಂಬ ಆರೋಪದಲ್ಲಿ ಸುದರ್ಶನ ಟಿವಿಯ ‘ಯುಪಿಎಸ್‍ಸಿ ಜಿಹಾದ್’ ಕಾರ್ಯಕ್ರಮ ಪ್ರಸಾರದ ವಿರುದ್ಧ ಪ್ರಕರಣದಲ್ಲಿ ಸಲ್ಲಿಸಿದ ಎರಡನೆ ಅಫಿದಾವಿತ್‍ನಲ್ಲಿ ಕೇಂದ್ರ ಸರಕಾರ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಡಿಜಿಟಲ್ ಮಾಧ್ಯಮಗಳಿಗೆ ಕೋರ್ಟು ನಿಯಂತ್ರಣ ಹೇರಬೇಕಾಗಿದೆ. ಈಗ ಇವುಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ದ್ವೇಷ ಪ್ರಚಾರ ಮಾತ್ರವಲ್ಲ ಮನಃ ಪೂರ್ವಕ ದಾಳಿಯನ್ನೂ, ಭಯೋತ್ಪಾದನೆ ಪ್ರೋತ್ಸಾಹವನ್ನು ನೀಡುತ್ತಿವೆ. ಇವುಗಳು ವ್ಯಕ್ತಿಗಳು ಮತ್ತು ಸಂಸ್ಥೆಯ ವರ್ಚಸ್ಸಿಗೆ ಕಳಂಕ ತರಬಹುದು ಎಂದು ಸುಪ್ರೀಂಕೋರ್ಟಿನಲ್ಲಿ ಹೇಳಿತು.

ಮಾರ್ಗಸೂಚಿ ನೀಡಲು ಬಯಸುವುದಾದರೆ ಸುಪ್ರೀಂ ಕೋರ್ಟು, ವೆಬ್ ಆಧಾರಿತ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಕೋರ್ಟಿನಲ್ಲಿ ಕೇಂದ್ರ ಸರಕಾರ ಹೇಳಿತು. ಇದಕ್ಕಿಂತ ಮೊದಲು ಸಲ್ಲಿಸಿದ ಅಫಿದಾವಿತ್‍ನಲ್ಲಿಯೂ ಇದೇ ನಿಲುವನ್ನು ತಿಳಿಸಿತ್ತು.

ಚಾನೆಲ್‍ಗಳ ವಿಷಯದಲ್ಲಿ ಅಲ್ಲ, ಡಿಜಿಟಲ್ ಮಾಧ್ಯಮಗಳ ವಿಷಯದಲ್ಲಿ ಮೊದಲು ತೀರ್ಪು ನೀಡಬೇಕಾಗಿದೆ ಎಂದು ಕೇಂದ್ರ ಸರಕಾರ ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿತು. ಚ್ಯಾನೆಲ್‍ಗಳಿಗೂ ಪತ್ರಿಕೆಗಳಿಗೆ ಸಾಕಷ್ಟು ನಿಯಂತ್ರಣಗಳಿವೆ. ಇವು ಎರಡರ ವಿಷಯದಲ್ಲಿ ಸಾಕಷ್ಟು ನಿಬಂಧನೆಗಳನ್ನು ಕೋರ್ಟು ತೀರ್ಪು ನೀಡಿದೆ.

ಆದರೆ, ಡಿಜಿಟಲ್ ಮಾಧ್ಯಮಗಳು ವಾಟ್ಸಪ್, ಟ್ವಿಟರ್, ಫೇಸ್‍ಬುಕ್ ಬಹುಬೇಗನೆ ವೈರಲ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಸಾಧ್ಯತೆ ಪರಿಗಣಿಸುವಾಗ ಡಿಜಿಟಲ್ ಮಾಧ್ಯಮಗಳು ಗಂಭೀರ ಪ್ರತ್ಯಾಘಾತ ಸೃಷ್ಟಿಸುತ್ತಿದೆ. ಈ ವಿಷಯವನ್ನು ಸುಪ್ರೀಂಕೋರ್ಟು ಪರಿಗಣಿಸಬೇಕೆಂದು ಕೇಂದ್ರ ವಾರ್ತಾ ಪ್ರಸಾರ ಸಚಿವಾಲಯ ಕೋರ್ಟಿನಲ್ಲಿ ಹೇಳಿತು.