ಗುಜರಾತ್: ಮದುವೆ ಮೆರವಣಿಗೆಯಲ್ಲಿ ಡಿಜೆ, ಪೇಟ; ದಲಿತ ವರನ ಮೇಲೆ ಸವರ್ಣೀಯರಿಂದ ಕಲ್ಲೆಸೆತ

0
655
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಗುಜರಾತಿನಲ್ಲಿ ದಲಿತ ಯುವಕನ ಮದುವೆ ದಿಬ್ಬಣಕ್ಕೆ ಕಲ್ಲೆಸೆದ 9 ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅರವಲ್ಲಿ ಜಿಲ್ಲೆಯ ಬಾಯತ್‍ನ ಸಮೀಫದ ಲಿಂಚ್ ಗ್ರಾಮದಲ್ಲಿ ಘಟನೆ ನಡೆದಿದೆ.

ಪೇಟ ಧರಿಸಿ, ಡಿಜೆ ಸಂಗಿತದೊಂದಿಗೆ ಮದುವೆ ಮೆರಣಿಗೆಯಿತ್ತು. ಇದರ ಮೇಲೆ ಮಂಗಳವಾರ ಸಂಜೆ ಕಲ್ಲೆಸೆತ ನಡೆಯಿತು. ರಾಜಪೂತ ಸಮುದಾಯದ ಒಂಬತ್ತು ಮಂದಿಯ ವಿರುದ್ಧ ಕೇಸು ದಾಖಲಾಗಿದ್ದು ಆಂಬಲಿಯರ ಪೊಲೀಸ್‍ ಇನ್ಸ್‌ಪೆಕ್ಟರ್ ಆರ್.ಎಂ ದಾಮೋದರ್ ಈ ವಿವರವನ್ನು ನೀಡಿದರು. ವರನ ಸಂಬಂಧಿಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಪರಂಪರಾಗತ ಪೇಟ ಧರಿಸಿ ಡಿಜೆ ಸಂಗೀತದೊಂದಿಗೆ ಮೆರವಣಿಗೆ ಹೊರಟಾಗ ವರನ ಸಂಬಂಧಿಕರಿಗೆ ಎಚ್ಚರಿಕೆ ನೀಡಲಾಗಿತ್ತು. ಇದಲ್ಲದೆ ದೂರುದಾರ ಮತ್ತು ಕುಟುಂಬದ ಮೇಲೆ ಕೊಲೆ ಬೆದರಿಕೆಯನ್ನು ಹಾಕಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ.