ಬಿಜೆಪಿ ಒಪ್ಪಿದರೂ ಒಪ್ಪದಿದ್ದರೂ ಇತಿಹಾಸ, ಇತಿಹಾಸವೇ: ಡಿ.ಕೆ. ಶಿವಕುಮಾರ್

0
714

ಸನಾರ್ಗ ವಾರ್ತೆ

ಬೆಂಗಳೂರು,ಜು.29: ರಾಜ್ಯದ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್, ಪ್ರವಾದಿ ಮುಹಮ್ಮದ್, ಯೇಸು ಕ್ರಿಸ್ತರನ್ನು ಕೈಬಿಟ್ಟಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರ ಎಲ್ಲವನ್ನೂ ರಾಜಕೀಯಗೊಳಿಸುತ್ತಿದೆ. ಅವರಿಗೆ ವೈಯಕ್ತಿಕ ಅಜೆಂಡಾದೊಂದಿಗೆ ಐತಿಹಾಸಿಕ ಅಜೆಂಡಾವೂ ಇದೆ. ಇದನ್ನು ಅಂಗೀಕರಿಸಲು ಸಾಧ್ಯವಿಲ್ಲ. ಅವರು ಒಪ್ಪಿದರೂ ಒಪ್ಪದಿದ್ದರೂ ಟಿಪ್ಪು, ಹೈದರಾಲಿ, ಪ್ರವಾದಿ ಮುಹಮ್ಮದ್‍‌ರೆಲ್ಲ ಇತಿಹಾಸವಾಗಿದ್ದಾರೆ. ಜಂಟಿ ಕಮಿಟಿ ಸೆಷನಿನಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರಪತಿ ಕೂಡ ಟಿಪ್ಪುವನ್ನು ಹೊಗಳಿದ್ದಾರೆ. ಟಿಪ್ಪು ಜಯಂತಿ ಆಚರಿಸುವುದು ಆಚರಿಸದಿರುವುದು ಬೇರೆ ವಿಷಯ. ಇತಿಹಾಸ ಇತಿಹಾಸವೇ ಆಗಿದೆ. ಪಾಠಪುಸ್ತಕ ಡ್ರಾಫ್ಟ್ ಕಮಿಟಿ ಕರಿಕುಲಂ ಬದಲಿಸಲು ಶ್ರಮಿಸುತ್ತಿದೆ. ಇದು ಸರಿಯಲ್ಲ. ನಮಗೆ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ’ -ಡಿಕೆ ಶಿವಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಕೊರೋನ ಮುಂದಿಟ್ಟು ಅಧ್ಯಯನ ದಿನಗಳನ್ನು ಕಡಿಮೆ ಮಾಡುವ ನೆಪದಲ್ಲಿ ಪಠ್ಯಪುಸ್ತಕಗಳಿಂದ ಮೈಸೂರು ಆಡಳಿತಗಾರ ಹೈದರಾಲಿಯಾಲಾಗಿ, ಟಿಪ್ಪು ಸುಲ್ತಾನ್‍ರನ್ನು ಕರ್ನಾಟಕ ಸರಕಾರ ದೂರವಿಟ್ಟಿದೆ. ಪ್ರವಾದಿ ಮುಹಮ್ಮದ್, ಯೇಸು ಕ್ರಿಸ್ತರ ಕುರಿತು ವಿವರಿಸುವ ಪಾಠ ಭಾಗಗಳನ್ನು, ಸಂವಿಧಾನ ಕುರಿತಾದ ಭಾಗಗಳನ್ನು ರಾಜ್ಯ ಶಿಕ್ಷಣ ಮಂಡಳಿ ಸಿಲೆಬಸ್‍ನಿಂದ ತೆರೆವು ಗೊಳಿಸಿತ್ತು. ಇದನ್ನು ಪ್ರತಿಭಟಿಸಿ ಬೆಂಗಳೂರು ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಕೊಡೊ ಮುಂತಾದವರು ರಂಗಪ್ರವೇಶಿಸಿದ್ದರು.

2015ರಲ್ಲಿ ಸಿದ್ದರಾಮಯ್ಯ ಸರಕಾರ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ್ದರು. ಇದರ ವಿರುದ್ಧ ಸಂಘಪರಿವಾರ ರಂಗ ಪ್ರವೇಶಿಸಿತ್ತು. ಯೆಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಇದು ರದ್ದಾಗಿತ್ತು. ಡಿಕೆ ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರು ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನರನ್ನು ಪ್ರಶಂಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.