ಸೋಂಕಿತ ಯುವತಿಯ ಮೇಲೆ ಅತ್ಯಾಚಾರ ಯತ್ನ; ವೈದ್ಯನ ವಿರುದ್ಧ ಪ್ರಕರಣ ದಾಖಲು

0
237

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ.3: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ಪೀಡಿತ ಯುವತಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಆರೋಪದಲ್ಲಿ ವೈದ್ಯರ ವಿರುದ್ಧ ಕೇಸು ದಾಖಲಾಗಿದೆ.

ಜುಲೈ 25ಕ್ಕೆ ಘಟನೆ ನಡೆದಿದೆ ಎನ್ನಲಾಗಿದೆ. ಟ್ರಾಮ ಕೇರ್ ಸೆಂಟರ್ ಡ್ಯೂಟಿಯಲ್ಲಿರುವ ವೈದ್ಯರು ರಾತ್ರೆ ಆರೋಗ್ಯ ತಪಾಸಣೆಗೆಂದು ಕೊರೋನ ವಾರ್ಡಿನಲ್ಲಿಯೇ ಉಳಿದಿದ್ದರು. ಯುವತಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದಾಗ ಯುವತಿ ಬೊಬ್ಬೆ ಹೊಡೆದಿದ್ದು, ವೈದ್ಯ ತಪ್ಪಿಸಿಕೊಂಡಿದ್ದಾನೆ.

ವೈದ್ಯ ಗೌನ್ ಮತ್ತು ಮಾಸ್ಕ್ ಧರಿಸಿದ್ದರಿಂದ ಯುವತಿಗೆ ಗುರುತಿಸಲು ಸಾಧ್ಯವಾಗಿಲ್ಲ. ಯುವತಿ ಟ್ರಾಮ ಕೇರ್ ಸೆಂಟರ್ ನೋಡಲ್ ಅಧಿಕಾರಿಗೆ ದೂರು ನೀಡಿದ್ದಾಳೆ. ಆದರೆ, ಆಸ್ಪತ್ರೆಯು ಅಧಿಕೃತ ವೈದ್ಯರ ವಿವರಗಳನ್ನು ಕೊಡಲು ತಯಾರಾಗಿಲ್ಲ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಸಮಿತಿಯನ್ನು ನೇಮಿಸಲಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ಸೂಪರಿಡೆಂಟ್ ಡಾ. ರಮೇಶ್ ಕೃಷ್ಣ.ಕೆ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.