ಪೋಪ್‍ ಫ್ರಾನ್ಸಿಸ್‍‌ರ ಖಾಸಗಿ ವೈದ್ಯ ಕೊರೋನಕ್ಕೆ ಬಲಿ

0
88

ಸನ್ಮಾರ್ಗ ವಾರ್ತೆ

ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್‍ರ ಖಾಸಗಿ ವೈದ್ಯರು ಕೊರೋನ ವೈರಸ್ ದೃಢಪಟ್ಟು ನಂತರ ಮೃತಪಟ್ಟಿದ್ದಾರೆ ಎಂದು ವ್ಯಾಟಿಕನ್ ತಿಳಿಸಿದೆ. ಡಾ. ಫಬ್ರೀಸಿಯೊ ಸೊಕೊರ್ಸಿ(78) ಮೃತರಾದ ವೈದ್ಯರು. ಇವರು ಪೋಪ್‍ರ ಸಂಪರ್ಕದಲ್ಲಿದ್ದರೆ ಎಂಬ ಕುರಿತು ವರದಿಯಾಗಿಲ್ಲ.

2015ರಿಂದ ಅವರು ಪೋಪ್‍ರ ಖಾಸಗಿ ವೈದ್ಯರಾಗಿ ನೇಮಕಗೊಂಡಿದ್ದರು. ಅನಾರೋಗ್ಯದ ಬಳಿಕ ಡಿಸೆಂಬರಿನಿಂದ ಅವರು ರೋಮ್‍ನ ಆಸ್ಪತ್ರೆಯಲ್ಲಿದ್ದರು. ಮುಂದಿನವಾರ ವಿತರಿಸುವ ಕೊರೋನ ವ್ಯಾಕ್ಸಿನ್ ನಾನು ಸ್ವೀಕರಿಸುವೆ ಎಂದು ಪೋಪ್ ಈಗಾಗಲೇ ಘೋಷಿಸಿದ್ದಾರೆ.