ಜೋ ಬೈಡನ್ ಡ್ರಗ್ಸ್ ಬಳಸುತ್ತಾರೆ: ಡೊನಾಲ್ಡ್ ಟ್ರಂಪ್ ಆರೋಪ

0
323

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.16: ಡೆಮಕ್ರಾಟಿಕ್ ಪಾರ್ಟಿಯ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡ್ರಗ್ಸ್ ಬಳಸುತ್ತಿದ್ದಾರೆ ಎಂದು ಫ್ಯಾಕ್ಸ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಡೆಮಕ್ರಾಟಿಕ್ ಪಾರ್ಟಿಯ ತನ್ನ ಪ್ರತಿಸ್ಪರ್ಧಿ ಜೋ ಬೈಡನ್ ಚರ್ಚೆಯಲ್ಲಿ ಭಾಗವಹಿಸುವುದಕ್ಕಾಗಿ ಮಾದಕ ವಸ್ತು ಸೇವಿಸುತ್ತಾರೆ. ಸಂವಾದಗಳಲ್ಲಿ ಬೈಡನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದಕ್ಕೆ ಕಾರಣ ಏನೋ ಉಪಯೋಗಿಸುತ್ತಿದ್ದಾರೆ. ಅದು ಯಾವುದೆಂದು ನಮಗೆ ಗೊತ್ತಾಗಬೇಕು.

ಬೈಡನ್‍ರ ವಿಷಯದಲ್ಲಿ ಕೆಲವು ವಿಚಿತ್ರ ಕಾರ್ಯಗಳು ನಡೆಯುತ್ತಿವೆ. ಸೆಪ್ಟಂಬರ್ 29ಕ್ಕೆ ನಡೆಯುವ ಅಧ್ಯಕ್ಷೀಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಬೈಡನ್ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ. ನಾನು ಪರೀಕ್ಷೆಗೊಳಗಾಗುವೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಅಧ್ಯಕ್ಷೀಯ ಅಭ್ಯರ್ಥಿಯಾದ ಜೋ ಬೈಡನ್ ಒಂದು ದುರಂತವಾಗಿದ್ದಾರೆ. ಚೀನದ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಮುಂತಾದ ಹಲವಾರು ಮೌಲ್ಯಹೀನ ಆರೋಪಗಳನ್ನು ಟ್ರಂಪ್ ಜೋ ಬೈಡನ್ ವಿರುದ್ಧ ಮಾಡಿದ್ದಾರೆ.

ಬೈಡನ್ ಫ್ಲಾರಿಡಾದ ರೇಡಿಯೊಕ್ಕೆ ನೀಡಿದ ಸಂದರ್ಶನಕ್ಕೆ ಪ್ರತಿಯಾಗಿ ಬೈಡನ್ ಓರ್ವ ಮೂರ್ಖ ಮತ್ತು ಅವರ ಹೇಳಿಕೆಗಳೆಲ್ಲ ಮೂರ್ಖತನದ್ದು. ಅವರೊಂದಿಗೆ ಸಂವಾದಕ್ಕೆ ಕಾದಿದ್ದೇನೆ ಎಂದು ಟ್ರಂಪ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.