ಕಾಪಿಟಲ್ ಗಲಭೆ: ಅಮೆರಿಕನ್ ಇತಿಹಾಸದಲ್ಲಿ ಎರಡನೆ ಬಾರಿ ದೋಷಾರೋಪಣೆಗೆ ಗುರಿಯಾದ ಅಧ್ಯಕ್ಷ ಟ್ರಂಪ್

0
199

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕ್ಯಾಪಿಟಲ್ ಗಲಭೆಗೆ ಸಂಬಂಧಿಸಿದಂತೆ ಅಮೆರಿಕ ಸಂಸತ್‌ ಡೊನಾಲ್ಡ್ ಟ್ರಂಪ್‌ ಮೇಲೆ ದೋಷಾರೋಪಣೆಯನ್ನು ಹೊರಿಸಿದ್ದು, ಅಮೆರಿಕ ಇತಿಹಾಸದಲ್ಲೇ ಎರಡನೆಯ ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದಾರೆ.

ಅಧಿಕೃತವಾಗಿ ಹುದ್ದೆ ತೊರೆದು ಹೋಗಲು ಡೊನಾಲ್ಡ್ ಟ್ರಂಪ್‌ಗೆ ಒಂದು ಕೊನೆಯ ಅವಕಾಶವನ್ನು ಡೆಮಕ್ರಾಟ್ಸ್ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಅವಧಿ ಕೊನೆಯಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದೆ‌.

ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಕೃತ್ಯ ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಹಿಂಸಾಚಾರ, ಐವರ ಸಾವು ಪ್ರಕರಣ ದೊಡ್ಡ ಸಮಸ್ಯೆ ಸೃಷ್ಟಿಸಿತ್ತು. ಗಲಭೆ ಹಾಗೂ ಹಿಂಸೆಗೆ ಪ್ರೇರಣೆ ನೀಡಿದ ಆರೋಪ, ಜಾರ್ಜಿಯಾದ ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಗಳನ್ನು ಟ್ರಂಪ್ ಮೇಲೆ ಡೆಮಕ್ರಾಟ್ ಪಕ್ಷವು ಹೊರಿಸಿತ್ತು. ಗಲಭೆಗೆ ಪ್ರೇರಣೆ ನೀಡಿಲ್ಲ ಎಂಬುದಾಗಿ ಟ್ರಂಪ್ ಹೇಳಿದ್ದರೂ ಕೂಡ ವುನಾವಣಾ ಫಲಿತಾಂಶ ತಿರುಚಲು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದನ್ನು ಅವರು ನಿರಾಕರಿಸಿರಲಿಲ್ಲ.