ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಅಮೆರಿಕದ ಚುನಾವಣೆಯಲ್ಲಿ ಜೊ ಬೈಡನ್ರನ್ನು ಅಧಿಕೃತವಾಗಿ ವಿಜಯಿಯೆಂದು ಘೋಷಿಸಿದರೆ ವೈಟ್ಹೌಸ್ನಿಂದ ಹೊರಬರುವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ, ಚುನಾವಣೆಯಲ್ಲಿ ತನ್ನ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇಲೆಕ್ಟರಲ್ ಕಾಲೇಜಿನಲ್ಲಿ ಬೈಡನ್ ವಿಜಯಿ ಎಂದು ಘೋಷಿಸಿದರೆ ವೈಟ್ ಹೌಸ್ನಿಂದ ಹೊರಬರುವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು ಹೇಳಿದರು. ಖಂಡಿತ ನಾನು ಅದನ್ನು ಹೇಳುವೆ. ನಿಮಗೆ ಅದು ತಿಳಿದಿದೆಯಲ್ಲ ಎಂದು ಟ್ರಂಪ್ ಮರು ಪ್ರಶ್ನೆ ಹಾಕಿದರು.
ಇದೇವೇಳೆ, ಅವರು ಹೀಗೆ ಮಾಡುವುದಾದರೆ ಅವರು ತಪ್ಪು ಮಾಡುತ್ತಿದ್ದಾರೆ. ಅದನ್ನು ಒಪ್ಪಲು ತುಂಬ ಕಷ್ಟವಿದೆ ಎಂದು ಟ್ರಂಪ್ ಹೇಳಿದರು. ಜನವರಿ 20ಕ್ಕೆ ಬಹಳಷ್ಟು ವಿಷಯಗಳು ನಡೆಯುತ್ತವೆ ಎಂದು ನಾನು ಭಾವಿಸುತ್ತಿದ್ದೇನೆ ಎಂದು ಅವರು ಹೇಳಿದರು.