ಅಬ್‍ಹಾ ವಿಮಾನ ನಿಲ್ದಾಣಕ್ಕೆ ಹೂಥಿಗಳ ದಾಳಿ: ನಾಲ್ವರು ಭಾರತೀಯರ ಸಹಿತ 21 ಮಂದಿಗೆ ಗಾಯ

0
829

ಜಿದ್ದ, ಜೂ.24: ದಕ್ಷಿಣ ಸೌದಿ ಅರೇಬಿಯದ ಅಬ್ಹಾ ವಿಮಾನ ನಿಲ್ದಾಣಕ್ಕೆ ರವಿವಾರ ರಾತ್ರೆ ಹೂಥಿ ಡ್ರೋನ್ ದಾಳಿ ನಡೆಸಿದ್ದು ನಾಲ್ವರು ಭಾರತೀಯರ ಸಹಿ 21 ಮಂದಿ ಗಾಯಗೊಂಡಿದ್ದಾರೆ. ಓರ್ವ ಸಿರಿಯ ಪ್ರಜೆ ಸಾವಿಗೀಡಾಗಿದ್ದಾನೆ. ನಿನ್ನೆ ರಾತ್ರೆ 9: 10ಕ್ಕೆ ದಾಳಿ ನಡೆಯಿತು. ಗಾಯಾಳುಗಳಲ್ಲಿ 2 ಮಕ್ಕಳು ಸೇರಿದ್ದಾರೆ. ಮೂವರು ಮಹಿಳೆಯರು, 13 ಮಂದಿ ಸ್ವದೇಶಿಗಳು ಜೊತೆ ನಾಲ್ವರು ಭಾರತೀಯರು. ಇಬ್ಬರು ಈಜಿಪ್ಟ್ ನವರು. ಇಬ್ಬರು ಬಾಂಗ್ಲಾದೇಶೀಯರು. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ರವಿವಾರ ದಾಳಿಯಲ್ಲಿ ಗಾಯಗೊಂಡಿರುವ ಭಾರತೀಯರ ಕುರಿತು ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ.

ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಾಹನಗಳಿಗೂ ಹಾನಿಯಾಗಿದೆ. ರನ್‍ವೆಯಲ್ಲಿ ಲ್ಯಾಂಡ್ ಮಾಡಿ ಪಾರ್ಕಿಂಗೆ ಬಂದ ವಿಮಾನವನ್ನು ಗುರಿಯಾಗಿಟ್ಟು ದಾಳಿ ನಡೆದಿದೆ. ಸ್ಫೋಟಕ ವಸ್ತುಗಳು ತುಂಬಿದ್ದ ಡ್ರೋಣ್ ಬಂದು ಅಪ್ಪಳಿಸಿದೆ. ಇರಾನ್ ಬೆಂಬಲದಲ್ಲಿ ಯಮನ್‍ನ ಹೂಥಿಗಲು ದಾಳಿ ನಡೆಸುತ್ತಿದ್ದು, ಇವರನ್ನು ಬಲವಾಗಿ ಎದುರಿಸುತ್ತೇವೆ ಎಂದು ಸೌದಿಸಖ್ಯಸೇನೆಯ ವಕ್ತಾರ ಕರ್ನಲ್ ತುರ್ಕಿ ಅಲ್‍ಮಾಲಿಕಿ ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಈವರೆಗೆ ಹೂಥಿಗಳಿಂದ 13 ಬಾರಿ ಡ್ರೋಣ್ ದಾಳಿ ನಡೆದಿದೆ.