ಜೈಲಿನಿಂದ ಎರಡನೆಯ ಬಾರಿ ಮರಣದಂಡನೆಗೆ ಗುರಿಯಾದ ಕೈದಿ ಪರಾರಿ

0
229

ಸನ್ಮಾರ್ಗ ವಾರ್ತೆ

ಇಂಡೊನೇಷ್ಯ,ಸೆ.22: ಇಂಡೊನೇಶಿಯದ ರಾಜಧಾನಿಯ ಜೈಲೊಂದರಿಂದ ಮರಣದಂಡನೆಗೆ ಗುರಿಯಾದ ಚೀನದ ಡ್ರಗ್ಸ್ ಸಾಗಾಟದಾರ ಕಾಯ್ ಚಾಂಗ್‍ವಾನ್(37) ಸುರಂಗ ತೋಡುವ ಮೂಲಕ ತಪ್ಪಿಸಿಕೊಂಡಿದ್ದಾನೆ. ಈ ರೀತಿ ಈತ ಎರಡನೇ ಬಾರಿ ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

ಮೊಟೊಪ್ಲಾಟೊಮೈನ್ ಕಳ್ಳಸಾಗಾಟಕ್ಕೆ ಶಿಕ್ಷೆಗೆ ಗುರಿಯಾಗಿದ್ದ ಚಾಂಗ್‍ವಾನ್ ತಂಗೊರಾಂಗ್ ಪ್ರದೇಶದ ಜೈಲಿನಿಂಂದ ಮಾಲಿನ್ಯ ಹರಿಯುವ ಪೈಪ್ ಇರುವೆಡೆಗೆ ಸುರಂಗ ಕೊರೆದು ಅದರ ಮೂಲಕ ತಪ್ಪಿಸಿಕೊಳ್ಳುವಳ್ಳಿ ಯಶಸ್ವಿಯಾಗಿದ್ದಾನೆ ಎಂದು ಜಕಾರ್ತ ಪೊಲೀಸ್ ವಕ್ತಾರ ಯುಸ್ರಿ ಯೂನುಸ್ ತಿಳಿಸಿದ್ದಾರೆ.

ಜೈಲಿನ ಅಡಿಗೆ ಕೋಣೆಯ ನಿರ್ಮಾಣ ಕೆಲಸದ ವೇಳೆ ನೀಡಿದ್ದ ಉಪಕರಣಗಳನ್ನು ಬಳಸಿ ಈತ ಸುರಂಗ ಕೊರೆದಿದ್ದಾನೆ.

ಸುಮಾರು ಆರು ತಿಂಗಳು ಮೊದಲು ಸುರಂಗ ಕೊರೆಯಲು ಈತ ಆರಂಭಿಸಿದ್ದ ಎಂದು ಚಾಂಗ್‍ವಾನ್‍ನ ಸೆಲ್ಲ್‌ನಲ್ಲಿ ಅವನ ಜೊತೆಯಿದ್ದ ವ್ಯಕ್ತಿ ಹೇಳಿದ್ದಾನೆ ಎಂದು ಇಂಡೊನೇಶಿಯದ ಡೈರಕ್ಟರೇಟ್ ಜನರಲ್ ಆಫ ಪ್ರಿಸನ್ ವಕ್ತಾರ ರಿಕ್ಕ ಅಪ್ರಿಯಂತಿ ಮಾಧ್ಯಮಗಳಿಗೆ ತಿಳಿಸಿದರು. ಜೈಲಿನ ಕಾವಲುಗಾರರು ಬದಲಾಗುವ ಸಮಯದಲ್ಲಿ ಈತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.

ಇಂಡೊನೇಶಿಯದ ವೆಬ್‍ಸೈಟ್ ವರದಿಯ ಪ್ರಕಾರ 135 ಕಿಲೊ ಗ್ರಾಂ ಡ್ರಗ್ಸ್ ಸಾಗಾಟದಲ್ಲಿ 2017ರಲ್ಲಿ ಈತನ ವಿರುದ್ಧ ಮರಣ ದಂಡನೆ ತೀರ್ಪು ಬಂದಿತ್ತು. ಪೊಲೀಸರು ನಡೆಸಿದ ತನಿಖೆಯ ವೇಳೆ 70 ಕಿಲೊ ಡ್ರಗ್ಸ್ ವಶವಾಗಿತ್ತು. 2017ರಲ್ಲಿಯೇ ಪೊಲೀಸ್ ಡಿಟೆನ್ಶನ್ ಸೆಂಟರ್‌ನ ಶೌಚಾಲಯದ ಗೋಡೆಗೆ ಸುರಂಗ ಕೊರೆದು ಇದಕ್ಕಿಂತ ಮೊದಲು ಚಾಂಗ್‍ವಾನ್ ತಪ್ಪಿಸಿಕೊಂಡಿದ್ದ. ಇಂಡೊನೇಶಿಯ ಪೊಲೀಸ್ ಈತನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.