ನಟ ಸುಶಾಂತ್‍ ಖಾತೆಯಿಂದ ಕಾಣೆಯಾದ 17 ಕೋಟಿ ರೂ: ನಿರ್ಮಾಪಕನ ಮನೆಗೆ ಇಡಿ ದಾಳಿ

0
205

ಸನ್ಮಾರ್ಗ ವಾರ್ತೆ

ಮುಂಬೈ,ನ.21: ಬಾಲಿವುಡ್ ನಟ ಸುಶಾಂತ್ ಸಿಂಗ್‍ರಿಗೆ ಸಂಭಾವನೆಯಾಗಿ ಸಿಕ್ಕಿದ್ದ 17 ಕೋಟಿ ರೂಪಾಯಿ ನಾಪತ್ತೆಯಾದ ಪ್ರಕರಣದಲ್ಲಿ ನಿರ್ಮಾಪಕ ದಿನೇಶ್ ವಿಜಯ್‍ರ ಮನೆಗೆ ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್(ಇಡಿ) ದಾಳಿ ಮಾಡಿದೆ.

ಸುಶಾಂತ್‍ರ ಪ್ರಿಯತಮೆ ರಿಯಾ ಚಕ್ರವತಿ ಹಣ ತೆಗೆದುಕೊಂಡಿದ್ದಾರೆ ಎಂದು ದಿವಂಗತ ನಟ ಸುಶಾಂತ್‍ರ ತಂದೆ ಆರೋಪಿಸಿದ್ದರು. ಸುಶಾಂತ್‍ರ ಖಾತೆಯಿಂದ 15 ಕೋಟಿ ರೂಪಾಯಿ ನಾಪತ್ತೆಯಾಗಿದೆ ಎಂದು ತಂದೆ ದೂರು ನೀಡಿದ್ದರು.

ನಿರ್ಮಾಪಕರು ಕಳೆದ ತಿಂಗಳು ಇಡಿ ವಿಚಾರಣೆಗೊಳಗಾಗಿದ್ದರು. ಸಿನೆಮಾದ ಬಜೆಟ್ ಸುಶಾಂತ್‍ರಿಗೆ ನೀಡಿದ ಹಣ ಕುರಿತು ದಾಖಲೆಗಳನ್ನು ಹಾಜರು ಪಡಿಸಲು ಇಡಿ ಆದೇಶಿಸಿತ್ತು. ಆದರೆ ನಿರ್ಮಾಪಕ ದಾಖಲೆಗಳನ್ನು ಹಾಜರು ಪಡಿಸಿರಲಿಲ್ಲ. ನಂತರ ಅವರ ಮನೆಗೆ ಇಡಿ ದಾಳಿ ಮಾಡಿ ತಪಾಸಣೆ ನಡೆಸಿತೆಂದು ವರದಿಯಾಗಿದೆ. ಇಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ ಎನ್ನಲಾಗುತ್ತಿದೆ.

ರಾಬ್ತ ಸಿನೆಮಾದ ಸಂಭಾವಣೆ 17 ಕೋಟಿ ಸುಶಾಂತ್‌ಗೆ ನೀಡಲಾಗಿತ್ತು ಎಂದು ಇಂಡಿಯಾ ಟುಡೆ ವರದಿ ಮಾಡಿತ್ತು.