ನಕಲಿ ಟಿಆರ್‌ಪಿ ಪ್ರಕರಣದಲ್ಲಿ ED ತನಿಖೆ ಆರಂಭ: ರಿಪಬ್ಲಿಕ್ ಚಾನೆಲ್ ವಿತರಣಾ ಮುಖ್ಯಸ್ಥ ಸಹಿತ12 ಜನರ ಬಂಧನ

0
642

ಸನ್ಮಾರ್ಗ ವಾರ್ತೆ

ಮುಂಬೈ:ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ನಕಲಿ ಟಿಆರ್‌ಪಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ.

ಮೂಲಗಳ ಪ್ರಕಾರ, ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುವಂತೆ ಇಡಿಯನ್ನು ಕೋರಿದ್ದು, ಮುಂಬೈ ಪೊಲೀಸರು ಹಲವಾರು ಚಾನೆಲ್‌ಗಳ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿಗೆ ಹಸ್ತಾಂತರಿಸಿದ್ದಾರೆ. ಸಿಐಯು ಈ ಪ್ರಕರಣದಲ್ಲಿ ಇದುವರೆಗೆ ರಿಪಬ್ಲಿಕ್ ಟಿವಿ ಚಾನೆಲ‌್‌ನ ವಿತರಣಾ ಮುಖ್ಯಸ್ಥ ಘನಶ್ಯಾಮ್ ಸಿಂಗ್ ಸಹಿತ 12 ಜನರನ್ನು ಬಂಧಿಸಲಾಗಿದೆ.

ಈ ಪ್ರಕರಣ ಬಾಂಬೆ ಹೈಕೋರ್ಟ್‌ನಲ್ಲೂ ಬಾಕಿ ಇದ್ದು, ಎರಡು ವಾರಗಳ ಹಿಂದೆ, ಬಾಂಬೆ ಹೈಕೋರ್ಟ್ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳಿಂದ ಉತ್ತರವನ್ನು ಕೋರಿತ್ತು.